ಬಹುಮಾನದ ಆಸೆಗೆ 400 ತಂಡ ನೊಂದಣಿ – ಕ್ರಿಕೆಟ್ ಪಂದ್ಯವೇ ರದ್ದು!
ಚಿಕ್ಕಮಗಳೂರು: ಕ್ರಿಕೆಟ್ ಅಂದ್ರೆ ಎಲ್ಲರಿಗೂ ಅಚ್ಚು ಮೆಚ್ಚಿನ ಕ್ರೀಡೆ, ಮಕ್ಕಳಿಂದ ಹಿಡಿದು ಕಾಲೇಜು ವಿದ್ಯಾರ್ಥಿಗಳು, ಹಿರೀಯ ನಾಗರಿಕರೆಲ್ಲರಿಗೂ ಕ್ರಿಕೆಟ್ ಅಂದ್ರೆ ಎಲ್ಲೆಇಲ್ಲದಷ್ಟು ಪ್ರೀತಿ. ಅದು ಕ್ರಿಕೆಟ್ ಕ್ರೀಡೆಯನ್ನು ನೋಡುವುದಿರಬಹುದು ಅಥವಾ ಆಡುವುದೇ ಆಗಿರಬಹುದು. ಯಾರಾದರೂ ಆಯೋಜಕರು ಕ್ರಿಕೆಟ್ ಆಯೋಜನೆ ಮಾಡಿದ್ದಾರೆ ಅಂತ ಗೊತ್ತಾದರೆ, ತಮ್ಮ ವ್ಯಾಪ್ತಿಗೆ ಬರುವ ಬಹುತೇಕ ಕ್ರಿಕೆಟ್ ಟೀಮ್‌ಗಳು ತಮ್ಮ ತಂಡವನ್ನು ಕಟ್ಟಿಕೊಂಡು ಆಡಲು ತಾ ಮುಂದು ನಾ ಮುಂದು ಅಂತ ತಮ್ಮ ಹೆಸರು ನೋಂದಾಯಿಸಿಕೊಳ್ಳುತ್ತಾರೆ.
ಆದರೆ ಎಷ್ಟೋ ಭಾರೀ ಈ ರೀತಿ ಆಯೋಜನೆಯಾದ ಕ್ರಿಕೆಟ್ ಪಂದ್ಯಾಟಗಳು ರದ್ದಾಗಿರೋದನ್ನೂ ಕೇಳಿದ್ದೇವೆ. ಸಾಮನ್ಯವಾಗಿ ಆಯೋಜನೆಯಾದ ಪಂಟ್ಯಾಟ ರದ್ದಾಗಲು ಹವಾಮಾನ ವೈಪರಿತ್ಯ, ನಾನಾ ಪರಿಸ್ಥಿತಿ ಹೀಗೆ ಬೇರೆ ಬೇರೆ ಕಾರಣಗಳಿರುತ್ತವೆ. ಆದರೆ ಯಾವತ್ತಾದರೂ ಆಯೋಜನೆ ಗೊಂಡ ಕ್ರಿಕೆಟ್ ಪಂದ್ಯಾಟ ವಿಜೇತರಿಗೆ ಘೋಷಿಸಿದ ಬಹುಮಾನದ ಕಾರಣದಿಂದ ರದ್ದಾಗಿದನ್ನು ಕೇಳಿದ್ದೀರಾ…. ನೋಡಿದ್ದೋರಾ…. ಅಥವಾ ಹೀಗೂ ಆಗಿದ್ಯಾ ಅಂತ ಅನ್ಕೋತ್ತೀರಾ…… ಅಷ್ಟಕ್ಕೂ ಆಯೋಜಕರು ಬಹುಮಾನದಲ್ಲೇನು ಘೋಷಿಸಿದ್ದಾರೆ… ಏನಿದು ವಿಷಯ ಅಂತ ತಿಳ್ಕೋಲ್ಕೆ ಮುಂದೆ ಓದಿ..
ಈ ರೀತಿ ಆಯೋಜಕರು ಘೋಷಿಸಿದ ಬಹುಮಾನದಿಂದಾಗಿ ಆಯೋಜನೆಗೊಂಡಿದ್ದ ಕ್ರಿಕೆಟ್ ಪಂದ್ಯಾಟ ರದ್ದಾಗಿರುವ ವಿಶೇಷ ಘಟನೆ ನಡೆದಿರುವುದು ಕಾಫಿ ನಾಡು ಚಿಕ್ಕಮಗಳೂರಿನಲ್ಲಿ. ಹೌದು ಚಿಕ್ಕಮಗಳೂರು ಜಿಲ್ಲೆಯ ಕಡಬಗೆರೆಯ ಗಾಂಧಿ ಮೈದಾನದಲ್ಲಿ ಕಾಫಿ ನಾಡಿನ ಕ್ರಿಕೆಟ್ ಪ್ರೇಮಿಗಳು ಕ್ರಿಕೆಟ್ ಟೂರ್ನಿಯೊಂದನ್ನು ಆಯೋಜನೆ ಮಾಡಿದ್ದರು. ಆಯೋಜಕರು ಪಂದ್ಯಾವಳಿಯಲ್ಲಿ ಗೆದ್ದವರಿಗೆ ಭಾರಿ ಮೊತ್ತದ ಹಾಗೂ ತುಂಬಾ ವಿಶಿಷ್ಟಕರವಾದ ಬಹುಮಾನ ನೀಡುವುದಾಗಿ ಪ್ರಚಾರ ನೀಡಿದ್ದರು. ಈ ಕ್ರಿಕೇಟ್ ಪಂಟ್ಯಾಟ ಫೆಬ್ರವರಿಯಂದು ನಡೆಯಬೇಕಿತ್ತು.
ಈ ನಡುವೆ ಆಯೋಜಕರು ನೀಡಲಿರುವ ಬಹುಮಾನಗಳ ಲಿಸ್ಟ್ ನೋಡಿದ ರಾಜ್ಯದ 400 ಕ್ಕೂ ಹೆಚ್ಚು ಕ್ರಿಕೆಟ್ ತಂಡಗಳು, ತಾವು ಸಹ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸುವುದಾಗಿ ನೊಂದಣಿ ಮಾಡಿಕೊಳ್ಳಲು ಮುಗಿ ಬಿದ್ದಿದ್ದರು. ಇದೀಗ ಪ್ರಕಟಣೆ ಹೊರಡಿಸಿದ ಒಂದೇ ದಿನದಲ್ಲಿ ರಾಜ್ಯದ ನಾನಾ ಕಡೆಯಿಂದ 400 ಕ್ಕೂ ಅಧಿಕ ತಂಡಗಳಿಂದ ಆಯೋಜಕರಿಗೆ ಕರೆಗಳು ಬಂದಿದೆ. ಅನೇಕ ತಂಡಗಳು ತಾವೂ ಪಂಟ್ಯಾಕೂಟದಲ್ಲಿ ಭಾಗವಹಿಸುವ ಉತ್ಸೂಕತೆಯನ್ನು ತೋರಿದ್ದು, ಹೀಗಾಗಿ ಅಪಾರ ಫೋನ್ ಕರೆಗಳಿಂದ ಹೆದರಿದ ಆಯೋಜಕರು ಸದ್ಯಕ್ಕೆ ಪಂದ್ಯಾವಳಿಯನ್ನು ರದ್ದುಗೊಳಿಸಿದ್ದಾರೆ. ಅಷ್ಟಕ್ಕೂ ಒಂದೇ ದಿನ 400 ಕ್ಕೂ ಹೆಚ್ಚು ಕ್ರಿಕೇಟ್ ತಂಡಗಳು ಆಡಲು ಈ ರೀತಿ ಮುಗಿಬೀಳುವಷ್ಟು ವಿಶೇಷವಾದ ಬಹುಮಾನಗಳಾದರೂ ಏನು ಅಂತೀರ ಇವೇ ನೋಡಿ
ಈ ಪಂದ್ಯಾ ಕೂಟದಲ್ಲಿ ಗೆದ್ದವರಿಗೆ ಮೊದಲನೇ ಬಹುಮಾನ- 30 ಕೆ. ಜಿ ತೂಗುವ ಕುರಿ ಹಾಗೂ 1 ಕೇಸ್ ಬಿಯರ್, ಎರಡನೇ ಬಹುಮಾನ- 6 ನಾಟಿ ಕೋಳಿ, 1 ಫುಲ್ ಬಾಟಲ್ ದುಬಾರಿ ಮದ್ಯ ಹಾಗೂ 1 ಕೇಸ್ ಬಿಯರ್ ಹಾಗೂ ಪಂದ್ಯಾವಳಿಯಲ್ಲಿ ಭಾಗವಹಿಸಿದ ಎಲ್ಲಾ ತಂಡಗಳಿಗೂ ತಂಪು ಪಾನೀಯವನ್ನು ಬಹುಮಾನವನ್ನಾಗಿ ನೀಡುವುದಾಗಿ ಹೇಳಿದ್ದಾರೆ. ಇಷ್ಟೆ ಅಲ್ಲದೆ ಸರಣಿ ಶ್ರೇಷ್ಠ ಆಟಗಾರನಿಗೆ 5 ಕೆ.ಜಿ ಈರುಳ್ಳಿ, ಉತ್ತಮ ದಾಂಡಿಗನಿಗೆ 1 ಕೆ.ಜಿ ಖಾರದ ಪುಡಿ ಹಾಗೂ ಉತ್ತಮ ಬೌಲರ್‌ಗೆ 2 ಲೀಟರ್ ಅಡುಗೆ ಎಣ್ಣೆ ನೀಡುವುದಾಗಿ ಬಹುಮಾನ ಘೋಷಿಸಿದ್ದಾರೆ.
ಈ ರೀತಿ ಇದೆ ನೋಡಿ ಬಹುಮಾನದ ಲೀಸ್ಟ್. ಇದನ್ನು ನೋಡಿದರೆ ಯಾರೇ ಆದರೂ ನಾವು ಒಂದು ಕ್ರಿಕೇಟ್ ಟೀಮ್ ಕಟ್ಟಿ ಹೋಗಬಹುದಿತ್ತು ಅಂದುಕೊಳ್ಳೋದರಲ್ಲಿ ಅನುಮಾನನೇ ಇಲ್ಲ ಅಲ್ವಾ. ಸದ್ಯ ಬಹುಮಾನದ ನಿರೀಕ್ಷೆಯಲ್ಲಿ ನೋಂದಣಿ ಮಾಡಿಕೊಂಡಿದ್ದ ಕ್ರಿಕೇಟ್ ಟೀಮ್‌ಗಳಿಗೆ ಮಾತ್ರ ಪಂದ್ಯಾಟ ರದ್ದಾಗಿರೋದು ಭಾರೀ ನಿರಾಸೆ ತಂದಿರೋದು ಸುಳ್ಳಲ್ಲ.