ಟಿಪ್ಪು ಸುಲ್ತಾನ್ ವಂಶಸ್ಥರು ಮತ್ತು ರಾಮ ಭಕ್ತರ ನಡುವೆ ಚುನಾವಣಾ ಸ್ಪರ್ಧೆ- ನಳಿನ್ ಕಟೀಲ್
ಬೆಂಗಳೂರು ಫೆ.16 : ತಮ್ಮ ಹೇಳಿಕೆ ಮೂಲಕ ಸುದ್ದಿಯಾಗುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಇದೀಗ ಮತ್ತೆ ಟಿಪ್ಪು ಸುಲ್ತಾನ್ ವಂಶಸ್ಥರು ಮತ್ತು ರಾಮ ಮತ್ತು ಹನುಮಾನ್ ಭಕ್ತರ ನಡುವೆ ಚುನಾವಣೆ ಸ್ಪರ್ಧೆ ಇದೆ ಎನ್ನುವ ಮೂಲಕ ವಿವಾದ ಸೃಷ್ಟಿಸಿಕೊಂಡಿದ್ದಾರೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾದಲ್ಲಿ ಮಾತನಾಡಿದ ಅವರು, ಜಿಲ್ಲೆಯ ಜನರು ರಾಮ ಮತ್ತು ಹನುಮಾನ್ ಭಕ್ತರೇ ಅಥವಾ ಟಿಪ್ಪುವಿನ ಭಜನೆಗಳನ್ನು ಹಾಡುತ್ತಾರಾ ಎಂದು ಪ್ರಶ್ನಿಸಿದರು. ಹಾಗೂ ‘ನಾವು ರಾಮ ಮತ್ತು ಹನುಮಂತನ ಭಕ್ತರು. ನಾವು ಟಿಪ್ಪುವಿನ ವಂಶಸ್ಥರಲ್ಲ, ನಾವು ಅವನ ವಂಶಸ್ಥರನ್ನು ವಾಪಸ್ ಕಳುಹಿಸಿದ್ದೇವೆ. ಆದ್ದರಿಂದ ನಾನು ಯಲಬುರ್ಗಾದ ಜನರನ್ನು ಕೇಳುತ್ತೇನೆ, ನೀವು ಹನುಮಂತನನ್ನು ಪೂಜಿಸುತ್ತೀರಾ ಅಥವಾ ಟಿಪ್ಪುವಿನ ಭಜನೆಗಳನ್ನು ಹಾಡುತ್ತೀರಾ? ಟಿಪ್ಪುವಿನ ಭಜನೆಗಳನ್ನು ಹಾಡುವ ಜನರನ್ನು ನೀವು ಓಡಿಸುತ್ತೀರಾ? ಅಂತ ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಟಿಪ್ಪು ಸುಲ್ತಾನ್ ವಂಶಸ್ಥರು ಮತ್ತು ರಾಮ ಮತ್ತು ಹನುಮಾನ್ ಭಕ್ತರ ನಡುವೆ ಚುನಾವಣೆ ಸ್ಪರ್ಧೆ ಇದೆ ಎನ್ನುವ ಮೂಲಕ ವಿವಾದ ಹುಟ್ಟು ಹಾಕಿದ್ದಾರೆ.