ಕುಕ್ಕುಂದೂರಿನ ವಿಜೇತ ವಿಶೇಷ ಶಾಲೆಯಲ್ಲಿ ವಿಶಿಷ್ಟ ರೀತಿಯಲ್ಲಿ ಗಣರಾಜ್ಯೋತ್ಸವ ಆಚರಣೆ

ಕಾರ್ಕಳ(ಉಡುಪಿ ಟೈಮ್ಸ್ ವರದಿ ): ನಗರದ ಕುಕ್ಕುಂದೂರಿನ ವಿಜೇತ ವಿಶೇಷ ಶಾಲೆಯಲ್ಲಿ 72 ನೇ ಗಣರಾಜ್ಯೋತ್ಸವವನ್ನು ವಿಶೇಷವಾದ ರೀತಿಯಲ್ಲಿ ಆಚರಿಸಲಾಯಿತು.
ಈ ಬಾರಿಯ ಗಣರಾಜ್ಯೋತ್ಸವವನ್ನು ವಿಭೀನ್ನವಾಗಿ ಆಚರಿಸುವ ನಿಟ್ಟಿನಲ್ಲಿ ಮಂಗಳೂರಿನ “ಮೇಕ್ ಸಂಒನ್ ಸ್ಮೈಲ್ ಹೆಲ್ಪಿಂಗ್ ಹ್ಯಾಂಡ್ ” ಎಂಬ ಯುವಕರ ತಂಡವು ವಿಲ್ ಮೇಕ್ ಇಟ್ ಕಲರ್ ಫುಲ್ ಎಂಬ ಪರಿಕಲ್ಪನೆಯಡಿಯಲ್ಲಿ ವಿಶೇಷವಾಗಿ ದೇಶದ ರಕ್ಷಣೆ ಮಾಡಲು ತಮ್ಮ ಜೀವವನ್ನೇ ಪಣಕ್ಕಿಡುವ ನಮ್ಮ ಸೈನಿಕರಿಗೆ ಗೌರವ ಸಲ್ಲಿಸುವ ದೃಷ್ಟಿಯಿಂದ ಶಾಲೆಯ ಗೋಡೆಗಳಿಗೆ ಭಾರತದ ಬಾರ್ಡರ್ ಚಿತ್ರಣದೊಂದಿಗೆ ನಮ್ಮ ಸೈನಿಕರ ತ್ಯಾಗ ಬಲಿದಾನ ನೆನಪಿಸುವ ಚಿತ್ರ ಬಿಡಿಸುವ ಮೂಲಕ ಹಾಗೂ ಶಾಲೆಯ ಮತ್ತೊಂದು ಭಾಗಕ್ಕೆ ತುಳುನಾಡಿನ ಸಂಸ್ಕೃತಿ ಬಿಂಬಿಸುವ ಯಕ್ಷಗಾನ, ಕಂಬಳ, ಹುಲಿವೇಷ, ಕರಾವಳಿ ಮೀನುಗಾರಿಕೆಯ ವರ್ಣ ಚಿತ್ರ, ತುಳು ಲಿಪಿಯಲ್ಲಿ ತಮ್ಮ ತಂಡದ ಹೆಸರು ಮತ್ತು ಬಾಲ್ಯದ ಕೆಲವು ಆಟಗಳಾದ “ಬೊಗರಿ ಆಟ, ಹಗ್ಗ ಜಗ್ಗಾಟ, ಗಾಳಿಪಟದಂಥ ಚಿತ್ರಗಳನ್ನು ಗೋಡೆಯಲ್ಲಿ ಬಿಡಿಸಲಾಯಿತು.

ಇದರೊಂದಿಗೆ “ಹ್ಯಾಷ್ ಟ್ಯಾಗ್” ಮೂಲಕ ಜನರಿಗೆ ಜಾಗೃತಿ ಮೂಡಿಸುವ ಗೋಡೆ ಬರಹಗಳನ್ನು ಬಿಡಿಸುವ ಮೂಲಕ ಈ ಬಾರಿಯ ಗಣರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸಲಾಯಿತು. ಈ ಚಿತ್ರಗಳನ್ನು ಶಾಲೆಗೆ ಸಮರ್ಪಿಸಲಾಯಿತು.

   ಗಣರಾಜ್ಯೋತ್ಸವದ ದ್ವಜಾರೋಹಣವನ್ನು ಮೋಹನ್ ಶೆಣೈ ಮತ್ತು ಅರುಣಾ ಎಂ. ಶೆಣೈ ದಂಪತಿಗಳು ನೆರವೇರಿಸಿದರು. ಜಿಲ್ಲಾ ನಕ್ಸಲ್ ನಿಗ್ರಹ ದಳದ ಎಸ್.ಪಿ, (ಐ ಪಿ ಎಸ್.) ಅಧಿಕಾರಿ ನಿಖಿಲ್ ಬುಲ್ಲವರ್ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಮೇಕ್ ಸಂ ಒನ್ ಸ್ಮೈಲ್ ತಂಡದ ವತಿಯಿಂದ ಡಾ. ವರ್ನೋಧರ್ ಹಾಗೂ ಆರ್ಟಿಸ್ಟ್ ನವೀನ್ ಅವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ. ಎಸ್, ಕೆ.ಎಂ.ಇ.ಎಸ್ ಸಂಸ್ಥೆಯ ಪ್ರಾಂಶುಪಾಲರಾದ ರಾಮಚಂದ್ರ ನೆಲ್ಲಿಕಾರ್, ಮೇಕ್ ಸಮ್ ಒನ್ ಸ್ಮೈಲ್ ತಂಡದ ಪ್ರಖ್ಯಾತ ಕಲಾವಿದರು ಹಾಗೂ ದಂತವೈದ್ಯರು ಡಾ.ವರ್ಣೋಧರ್, ದುರ್ಗಾ ವಿದ್ಯಾ ಸಂಘದ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ, ಶಾಲಾ ಸಂಸ್ಥಾಪಕಿ ಡಾ. ಕಾಂತಿ ಹರೀಶ್ ಅದ್ಯಕ್ಷರು ರತ್ನಾಕರ್ ಅಮೀನ್, ಟ್ರಸ್ಟಿ  ಸಿಯಾ ಸಂತೋಷ್ ನಾಯಕ್, ಕಿರಣ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!