2023ರ ಮಧ್ಯಾವಧಿಯಲ್ಲೇ ಮೋದಿ ರಾಜಿನಾಮೆ ನೀಡಬೇಕಾಗಬಹುದು: ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ

ಹೊಸದಿಲ್ಲಿ ಫೆ.15: ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ವಜಾಗೊಳಿಸದಿದ್ದರೆ  2023ರ ಮಧ್ಯಾವಧಿಯಲ್ಲೇ ರಾಜೀನಾಮೆ ನೀಡಬೇಕಾಗಬಹುದು ಎಂದು ಬಿಜೆಪಿಯ ಹಿರಿಯ ನಾಯಕ ಮತ್ತು ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ಹೇಳಿದ್ದಾರೆ.

ಅಜಿತ್‌ ದೋವಲ್‌ ವಿರುದ್ಧ ಗಂಭೀರ ಆರೋಪ ಮಾಡಿರುವ ಸುಬ್ರಮಣಿಯನ್ ಸ್ವಾಮಿ ಅವರು ಈ ಕುರಿತಾಗಿ ಟ್ವೀಟ್ ಮಾಡಿ,  “ಅಜಿತ್‌ ದೋವಲ್‌ ಪೆಗಾಸಸ್ ಟೆಲಿಫೋನ್ ಟ್ಯಾಪಿಂಗ್ ಒಳಗೊಂಡಂತೆ ಹಲವಾರು ಬಾರಿ ಎಡವಟ್ಟು ಮಾಡಿದ್ದಾರೆ.  ಮೋದಿ ಅವರು ಎನ್‌ಎಸ್‌ಎ ಹುದ್ದೆಯಿಂದ ದೋವಲ್ ಅವರನ್ನು ವಜಾಗೊಳಿಸಬೇಕು. ಇಲ್ಲದಿದ್ದರೆ 2023ರ ಮಧ್ಯದ ವೇಳೆಗೆ ಮೋದಿ ಕೂಡ ರಾಜೀನಾಮೆ ನೀಡಬೇಕಾಗಬಹುದು” ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, ಅಜಿತ್‌ ದೋವಲ್‌ ಮಾಡಿರುವ ಗಂಭೀರ ಯಡವಟ್ಟು ಶೀಘ್ರದಲ್ಲೇ ವಾಶಿಂಗ್ಟನ್‌ ಡಿಸಿಯಿಂದ ಹೊರಬೀಳಲಿದೆ ಎಂದು ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!