ಬಂಟಕಲ್ಲು: ಭೋವಿ ಸಂಘದ ವತಿಯಿಂದ 72 ನೇ ಗಣರಾಜ್ಯೋತ್ಸವದ ಆಚರಣೆ
ಉಡುಪಿ: ಜಿಲ್ಲಾ ಭೋವಿ ಸಂಘ ಹಾಗೂ ಬಂಟಕಲ್ಲಿನ ಕುಂಜಾರುಗಿರಿ ಭೋವಿ ಸಂಘದ ವತಿಯಿಂದ 72 ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಬಂಟಕಲ್ಲಿನಲ್ಲಿ ನಡೆಯಿತು. ಈ ವೇಳೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಸಮಾಜ ಸೇವಕ ಪವನ್ ಕುಮಾರ್ ಅವರು ಮಾತನಾಡಿ, ಪ್ರಜಾಪ್ರಭುತ್ವ ಪ್ರಜಾಸತ್ತಾತ್ಮಕ ಸಮಾಜವನ್ನು ನಿರ್ಮಿಸುತ್ತದೆ. ಪ್ರಜಾಪ್ರಭುತ್ವ ಎಂಬುದು ಸಹಕಾರ ಮತ್ತು ಸಮುದಾಯ, ಸಮಾನತೆ, ಸ್ವಾತಂತ್ರ‍್ಯ, ಅದರ ಜೊತೆಗೆ ವ್ಯಕ್ತಿಗಳ ಸಮಾನ ಮೌಲ್ಯವೇ ಆಗಿರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಗೌರವ ಸಲಹೆಗಾರ ಜಗದೀಶ ಪರ್ಕಳ ಅವರು ಆಶಿರ್ವಚನ ನೀಡಿದರು. ಜಿಲ್ಲಾಧ್ಯಕ್ಷರಾದ ಶಿವಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಆನಂದ ಕುಂಜಾರುಗಿರಿ, ಕೆ.ಪಿ.ಈಶ್ವರ್, ಶಂಕರ್ ಮೊದಲಾದವರು ಉಪಸ್ಥಿತರಿದ್ದರು.