ಅದಾನಿಯ 4 ಕಂಪೆನಿಗಳ ಎಮ್‌ಎಸ್‌ಸಿಐ ಸೂಚ್ಯಂಕ ಮೌಲ್ಯಕಡಿತ

ಹೊಸದಿಲ್ಲಿ, ಫೆ.10 : ಅದಾನಿ ಗುಂಪಿನ ನಾಲ್ಕು ಕಂಪೆನಿಗಳ ಫ್ರೀ ಫ್ಲೋಟ್ ಸ್ಥಾನಮಾನವನ್ನು ಕಡಿತಗೊಳಿಸುವುದಾಗಿ ಅಮೆರಿಕದ ಜಾಗತಿಕ ಶೇರು ಸೂಚ್ಯಂಕ ನಿರ್ವಾಹಕ ಮೋರ್ಗನ್ ಸ್ಟಾನ್ಲಿ ಕ್ಯಾಪಿಟಲ್ ಇಂಟನ್ರ್ಯಾಷನಲ್ ತಿಳಿಸಿರೋದಾಗಿ ವರದಿಯಾಗಿದೆ.

ಎಮ್.ಎಸ್.ಸಿ.ಐ ತನ್ನ ತ್ರೈಮಾಸಿಕ ಪರಿಶೀಲನೆಯ ಬಳಿಕ ಅದಾನಿ ಗುಂಪಿನ ನಾಲ್ಕು ಶೇರುಗಳ ಫ್ರೀ ಫ್ಲೋಟ್ ಸ್ಥಾನಮಾನವನ್ನು ಕಡಿತಗೊಳಿಸಿದೆ. ಎಮ್.ಎಸ್.ಸಿ.ಐ ಗ್ಲೋಬಲ್ ಸ್ಟ್ಯಾಂಡರ್ಡ್ ಇಂಡೆಕ್ಸ್‍ನಲ್ಲಿ, ಅದಾನಿ ಗುಂಪಿನ ಮುಂಚೂಣಿ ಕಂಪೆನಿ ಅದಾನಿ ಎಂಟರ್ ಪ್ರೈಸಸ್ ನ ಮೌಲ್ಯ (ವೇಟಿಂಗ್) ವನ್ನು 0.3 ಶೇಕಡದಷ್ಟು ಕಡಿತಗೊಳಿಸಿ 0.5 ಶೇಕಡಕ್ಕೆ ಇಳಿಸಲಾಗಿದೆ. ಅದಾನಿ ಟ್ರಾನ್ಸ್ ಮಿಶನ್, ಅದಾನಿ ಟೋಟಲ್ ಗ್ಯಾಸ್ ಮತ್ತು ಎಸಿಸಿ ಲಿಮಿಟೆಡ್ ಕಂಪೆನಿಗಳ ಮೌಲ್ಯಗಳನ್ನೂ ಕಡಿತಗೊಳಿಸಲಾಗಿದೆ. ಈ ನಡುವೆ ಅದಾನಿ ಗುಂಪಿನ ಕಂಪೆನಿಗಳ ಪರಿಶೀಲನೆ ಬಳಿಕ, ಅವುಗಳನ್ನು ಎಮ್‍ಎಸ್‍ಸಿಐ ಸೂಚ್ಯಂಕಗಳಿಂದ ತೆಗೆದು ಹಾಕದಿರಲೂ ಎಮ್‍ಎಸ್‍ಸಿಐ ನಿರ್ಧರಿಸಿದೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ.

ಗೌತಮ್ ಅದಾನಿ ಒಡೆತನದ ಕಂಪೆನಿಗಳು ಶೇರು ಮಾರುಕಟ್ಟೆಗಳಲ್ಲಿ ಹಸ್ತಕ್ಷೇಪ ನಡೆಸಿ ಶೇರುಗಳ ಬೆಲೆಗಳನ್ನು ಕೃತಕವಾಗಿ ಹೆಚ್ಚಿಸಿಕೊಂಡಿವೆ ಮತ್ತು ಕಂಪೆನಿಗಳು ತಪ್ಪು ಲೆಕ್ಕಗಳನ್ನು ಕೊಟ್ಟು ಹೂಡಿಕೆದಾರರನ್ನು ವಂಚಿಸುತ್ತಿವೆ ಎಂಬುದಾಗಿ ಅಮೆರಿಕದ ಹಿಂಡನ್ ಬರ್ಗ್ ರಿಸರ್ಚ್ ಆರೋಪಿಸಿದ ಬಳಿಕ ಗುಂಪಿನ ಕಂಪೆನಿಗಳ ಶೇರುಗಳು ಭಾರೀ ಪ್ರಮಾಣದಲ್ಲಿ ಕುಸಿದಿವೆ.

Leave a Reply

Your email address will not be published. Required fields are marked *

error: Content is protected !!