ಎಲ್.ಐ.ಸಿಗೆ ರೂ. 8,334 ಕೋಟಿ ಲಾಭ
ಮುಂಬೈ ಫೆ.10 : ಎಲ್.ಐ.ಸಿಯ ಡಿಸೆಂಬರ್ ತ್ರೈಮಾಸಿಕದ ನಿವ್ವಳ ಲಾಭವು ರೂ. 8,334 ಕೋಟಿ ಗಳಿಸಿದೆ ಎಂದು ವರದಿಯಾಗಿದೆ.
ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಪನಿಯು ರೂ. 1.11 ಲಕ್ಷ ಕೋಟಿಯನ್ನು ಪ್ರೀಮಿಯಂ ಸಂಗ್ರಹದ ಮೂಲಕ ಗಳಿಸಿದೆ. ಹಿಂದಿನ ವರ್ಷದಲ್ಲಿ ಇದು ರೂ.97 ಸಾವಿರ ಕೋಟಿ ಆಗಿತ್ತು. ಹಿಂದಿನ ವರ್ಷದ ಈ ಅವಧಿಯಲ್ಲಿ ಎಲ್.ಐ.ಸಿ ಷೇರುಪೇಟೆಯಲ್ಲಿ ನೋಂದಾಯಿತ ಆಗಿರಲಿಲ್ಲ.
ಹೂಡಿಕೆಗಳಿಂದ ಬಂದಿರುವ ವರಮಾನವು ರೂ.84,889 ಕೋಟಿಗೆ ತಲುಪಿದೆ ಎಂದು ಎಲ್.ಐ.ಸಿ ಷೇರುಪೇಟೆಗೆ ಮಾಹಿತಿ ನೀಡಿದೆ. ರೂ.2,000 ಕೋಟಿಯನ್ನು ಷೇರುದಾರರ ನಿಧಿಗೆ ವರ್ಗಾವಣೆ ಮಾಡಲು ಹಣ ತೆಗೆದಿರಿಸಿದ ನಂತರದಲ್ಲಿ ಕಂಪನಿಯ ನಿವ್ವಳ ಲಾಭವು ರೂ.6,334 ಕೋಟಿ ಆಗುತ್ತದೆ ಎಂದು ಅಧ್ಯಕ್ಷ ಎಂ.ಆರ್. ಕುಮಾರ್ ಹೇಳಿದ್ದಾರೆ. ಭಾರತೀಯ ಜೀವ ವಿಮಾ ನಿಗಮದ (ಎಲ್.ಐ.ಸಿ) ಹಿಂದಿನ ವರ್ಷದ ಇದೇ ಅವಧಿಯಲ್ಲಿ ಎಲ್.ಐ.ಸಿ 235 ಕೋಟಿ ಲಾಭಗಳಿಸಿತ್ತು.