ಡಿಕೆಶಿ ಪುತ್ರಿಗೆ ಸಿಬಿಐ ನೋಟಿಸ್: ರಾಜಕೀಯ ಪಿತೂರಿ-ಗುಂಡುರಾವ್

ಬೆಂಗಳೂರು ಫೆ.9 : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಅಕ್ರಮ ಆಸ್ತಿ ಸಂಪಾದನೆ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಇದೀಗ ಡಿಕೆಶಿ ಪುತ್ರಿ ಐಶ್ವರ್ಯಗೆ ನೋಟಿಸ್‌ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿಸಿದ್ದಾರೆ.

 ಎರಡು ತಿಂಗಳ ಹಿಂದೆ ಡಿಕೆಶಿ ಒಡೆತನದ ಕಾಲೇಜಿನಲ್ಲಿ ದಾಖಲೆಗಳನ್ನು ಪರಿಶೀಲನೆ ನಡೆಸಿದ ಅಧಿಕಾರಿಗಳು ಬಳಿಕ ಗ್ಲೋಬಲ್ ಕಾಲೇಜಿನಲ್ಲಿ ನಿರ್ದೇಶಕಿ ಆಗಿರುವ ಐಶ್ವರ್ಯಗೆ ನೋಟಿಸ್ ನೀಡಿ 10 ದಿನದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಎಂದು ತಿಳಿದು ಬಂದಿದೆ

ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಅವರು, ಡಿ.ಕೆ ಶಿವಕುಮಾರ್ ಅವರಿಗೆ ಈಡಿ ನೋಟಿಸ್ ಹಾಗೂ ಅವರ ಪುತ್ರಿಗೆ ಸಿಬಿಐ ನೋಟಿಸ್ ನೀಡಿರುವುದು ರಾಜಕೀಯ ಪಿತೂರಿ. ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರನ್ನೇ ಟಾರ್ಗೆಟ್ ಮಾಡಿಕೊಂಡು ED,CBI,ITಯಂತಹ ತನಿಖಾ ಏಜೇನ್ಸಿಗಳು ವಿಚಾರಣೆ ನೆಪದಲ್ಲಿ ಕಿರುಕುಳ ನೀಡುತ್ತಿವೆ. ಈ ತನಿಖಾ ಸಂಸ್ಥೆಗಳಿಗೆ ಕಾಂಗ್ರೆಸ್ ಬಿಟ್ಟು BJP ನಾಯಕರ ಹಗರಣಗಳು ಕಾಣುವುದಿಲ್ಲವೇ?’  ಎಂದು ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!