ಟ್ರಾಫಿಕ್ ರೂಲ್ಸ್ ಉಲ್ಲಂಘನೆ: ದಂಡ ಪಾವತಿಸಲು 50 ಶೇ. ರಿಯಾಯ್ತಿ..?
ಬೆಂಗಳೂರು ಫೆ.4 : ಸಂಚಾರ ನಿಯಮ ಉಲ್ಲಂಘಿಸಿ ದಂಡ ಬಾಕಿ ಉಳಿಸಿಕೊಂಡಿರುವ ವಾಹನ ಸವಾರರಿಗೆ ದಂಡ ಪಾವತಿಸಲು ಶೇ.50 ರಷ್ಟು ರಿಯಾಯ್ತಿ ನೀಡಿ ರಾಜ್ಯ ಸಂಚಾರಿ ಪೊಲೀಸ್ ಇಲಾಖೆ ಸಿಹಿ ಸುದ್ದಿ ನೀಡಿದೆ.
ಬೆಂಗಳೂರು ನಗರ ಸಂಚಾರಿ ಪೊಲೀಸ್ ಪ್ರಕಟಣೆಯಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಈ ದಂಡ ಕಟ್ಟಲು ವಾಹನ ಸವಾರರಿಗೆ ಫೆ.11 ರ ವರೆಗೆ ಅವಕಾಶ ನೀಡಲಾಗಿದ್ದು, ಬಾಕಿ ಇರುವ ದಂಡದ ವಿವರಗಳನ್ನು ವೀಕ್ಷಿಸಲು ಮತ್ತು ಪಾವತಿಸುವ ವಿಧಾನದ ಬಗ್ಗೆ ತಿಳಿದುಕೊಳ್ಳಲು ಕರ್ನಾಟಕ ಓನ್ ವೆಬ್ ಸೈಟ್ನಲ್ಲಿ ವಿವರಗಳನ್ನು ಪಡೆದುಪಾವತಿಸಬಹುದಾಗಿದೆ. ಪೇ ಟಿಎಂ ಆ್ಯಪ್ ಮುಖಾಂತರವು ಉಲ್ಲಂಘನೆಯ ವಿವರಗಳನ್ನು ಪಡೆದು ಪಾವತಿಸಬಹುದಾಗಿದೆ. ಇಲ್ಲವಾದಲ್ಲಿ ಹತ್ತಿರ ಸಂಚಾರ ಪೊಲೀಸ್ ಠಾಣೆಗಳಲ್ಲಿ ನಿಮ್ಮ ವಾಹನದ ನೊಂದಣಿ ಸಂಖ್ಯೆಯ ವಿವರಗಳನ್ನು ಒದಗಿಸಿ ಪಡೆಯಬಹುದಾಗಿದೆ. ದಂಡದ ಮೊತ್ತವನ್ನು ಪಾವತಿಸಿ ರಶೀದಿಯನ್ನು ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ಸಂಚಾರ ನಿರ್ವಹಣ ಕೇಂದ್ರದ ಮೊದಲನೆ ಮಹಡಿಯಲ್ಲೂ ಸಹ ಪಾವತಿಸಬಹುದಾಗಿದೆ ಎಂದು ತಿಳಿಸಲಾಗಿದೆ.
ಟ್ರಾಫಿಕ್ ಪೊಲೀಸರು ಸುಮಾರು 44 ತರಹದ ನಿಯಮಗಳ ಉಲ್ಲಂಘಟನೆಯ ಪಟ್ಟಿ ಬಿಡುಗಡೆ ಮಾಡಿದ್ದು, ಪುಟ್ ಪಾತ್ ಪಾರ್ಕಿಂಗ್ ಗೆ 1000 ದಂಡ ಇದ್ದು, 500 ರೂ. ರಿಯಾಯಿತಿ ನೀಡಲಾಗಿದೆ. ಫೆಕ್ಟೀವ್ ನಂಬರ್ ಪ್ಲೇಟ್ ಗೆ ಮೊದಲ ಪ್ರಕರಣಕ್ಕೆ 500 ರೂ. ದಂಡವಿದ್ದು, 250 ರಿಯಾಯಿತಿ. ಹೆಚ್ಚುವರಿ ಪ್ರಕರಣಗೆ 1,500 ರೂ. ದಂಡ ಇದ್ದು, 750 ರಿಯಾಯಿತಿ, ಸಿಗ್ನಲ್ ಜಂಪ್ ಗೆ 500 ರೂ ದಂಡ, 250 ರೂ ರಿಯಾಯಿತಿ. ಅತಿ ವೇಗಕ್ಕೆ 1000 ರೂ ದಂಡವಿದ್ದು, 500 ರೂ. ರಿಯಾಯಿತಿ ನೀಡಲಾಗಿದೆ.
ಟ್ರಾಫಿಕ್ ನಿಯಮ ಉಲ್ಲಂಘನೆ ದಂಡ ಪಾವತಿಗೆ ಶೇ 50 ರಷ್ಟು ರಿಯಾಯಿತಿ ನೀಡಿದ ಮೇಲೆ ನಿನ್ನೆ (ಫೆ.3) ಒಂದೇ ದಿನ ಕೋಟಿ ಕೋಟಿ ಹಣ ಹರಿದು ಬಂದಿದೆ. ನಿನ್ನೆ 5,61,55,000 ದಂಡದ ಹಣ ಸಂಗ್ರಹವಾಗಿದೆ. ಒಟ್ಟು 2,01,828 ಪ್ರಕರಣಗಳ ದಂಡ ಪಾವತಿಯಾಗಿದೆ. ಪೊಲೀಸ್ ಠಾಣೆಗಳಲ್ಲಿ 89,699 ಪ್ರಕರಣಗಳಿಂದ 2,17,24,990 ಕೋಟಿ ರೂ, ಪೇ ಟಿಎಂ ಮೂಲಕ 1,04,273 ಪ್ರಕರಣದಿಂದ 3, 23,68,900 ಕೋಟಿ, ಸಂಚಾರ ನಿರ್ವಹಣಾ ಕೆಂದ್ರದಲ್ಲಿ 540 ಪ್ರಕರಣ ದಂಡ ಪಾವತಿಯಾಗಿದ್ದು 89,650 ರೂ ಮತ್ತು ಬೆಂಗಳೂರು ಒನ್ ನಲ್ಲಿ 7,316 ಪ್ರಕರಣದಿಂದ 16,21,600 ರೂ ದಂಡ ಸಂಗ್ರಹವಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.