ಪದ್ಮಶ್ರೀ ಪುರಸ್ಕೃತ ನಿರ್ದೇಶಕ ‘ಕಲಾ ತಪಸ್ವಿ’ ಕೆ.ವಿಶ್ವನಾಥ್‌ ನಿಧನ

ಹೈದ್ರಾಬಾದ್, ಫೆ .3 : ತೆಲುಗು ಚಿತ್ರರಂಗದಲ್ಲಿ ‘ಕಲಾ ತಪಸ್ವಿ’ ಎಂದೇ ಹೆಸರುವಾಸಿಯಾಗಿದ್ದ ಹಿರಿಯ ನಿರ್ದೇಶಕ, ಪದ್ಮಶ್ರೀ ಪುರಸ್ಕೃತ ಕೆ.ವಿಶ್ವನಾಥ್  ಅವರು ನಿನ್ನೆ ರಾತ್ರಿ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.

ಕೆ.ವಿಶ್ವನಾಥ್ (92) ಅವರು ಕಳೆದ ಕೆಲ ಸಮಯದಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ನಿನ್ನೆ ರಾತ್ರಿ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

1951 ರಲ್ಲಿ ತೆಲುಗು-ತಮಿಳು ಚಲನಚಿತ್ರ ಪಾತಾಳ ಭೈರವಿ’ ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು 1965 ರಲ್ಲಿ ‘ಆತ್ಮ ಗೌರವಂ’ ಮೂಲಕ ನಿರ್ದೇಶಕನಾಗಿ ಕಾಲಿಟ್ಟರು. ಆ ಬಳಿಕ ಅವರ ನಿರ್ದೇಶನದ ‘ಶಂಕರಾಭರಣಂ’ ಸಿನಿಮಾ ಆ ಕಾಲದಲ್ಲಿ ಸೂಪರ್‌ ಹಿಟ್‌ ಆಗಿತ್ತು. ಅವರ ನಿರ್ದೇಶನಕ್ಕೆ ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರು ನಿರ್ದೇಶಕರಾಗಿ ಮಾತ್ರವಲ್ಲದೆ ಹಲವು ಚಿತ್ರಗಳಲ್ಲಿ ಅಭಿನಯಿಸಿ ನಟನೆಯ ಮೂಲಕವೂ ಸಿನಿ ಕ್ಷೇತ್ರದಲ್ಲಿ ತಮ್ಮ ಸೇವೆ ನೀಡಿದ್ದರು.

Leave a Reply

Your email address will not be published. Required fields are marked *

error: Content is protected !!