ಬೈಜೂಸ್ನ 1,000 ಉದ್ಯೋಗಿಗಳಿಗೆ ಗೇಟ್ ಪಾಸ್
ಹೊಸದಿಲ್ಲಿ, ಫೆ.3 : ಎಡ್ಟೆಕ್ ಯುನಿಕಾರ್ನ್ ಸಂಸ್ಥೆ ತನ್ನ 1,000ಕ್ಕೂ ಅಧಿಕ ಉದ್ಯೋಗಿಗಳನ್ನು ವಜಾ ಮಾಡಿದೆ.
ಪ್ರತಿ ಟೆಕ್ ತಂಡದಿಂದಲೂ ಸಿಬ್ಬಂದಿಗಳನ್ನು ವಜಾಮಾಡಲಾಗಿದೆ. ನನ್ನ ತಂಡದಲ್ಲಿಯೂ ತೀವ್ರ ಉದ್ಯೋಗ ಕಡಿತಗಳಾಗಿವೆ `ಎಂದು ಬೈಜುಸ್ ನ ಇಂಜಿನಿಯರಿಂಗ್ ತಂಡದ ಉದ್ಯೋಗಿಯೋರ್ವರು ತಿಳಿಸಿದ್ದಾಗಿ ಮಾಧ್ಯಮಗಳು ವರದಿ ಮಾಡಿದೆ.
ಖರ್ಚುಗಳನ್ನು ಮತ್ತು ಹೆಚ್ಚುತ್ತಿರುವ ನಷ್ಟಗಳನ್ನು ಕಡಿಮೆ ಮಾಡಲು ಎಲ್ಲ ವಿಭಾಗಗಳಿಂದ ಸುಮಾರು 2,500 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಬೈಜುಸ್ ಕಳೆದ ವರ್ಷದ ಜೂನ್ ನಲ್ಲಿ ತಿಳಿಸಿತ್ತು. ಅದರಂತೆ ಇದೀಗ ಕಂಪನಿಯು ಎಲ್ಲಾ ಫ್ರೆಷರ್ಸ್ ಗಳನ್ನು ಕೆಲಸದಿಂದ ಕಿತ್ತುಹಾಕಿದೆ. 50,000 ಸಿಬ್ಬಂದಿಗಳನ್ನು ಹೊಂದಿರುವ ಎಡ್ಟೆಕ್ ಯುನಿಕಾರ್ನ್ ಸಂಸ್ಥೆ ವಜಾ ಮಾಡಿರುವ 1000 ಕ್ಕೂ ಅಧಿಕ ಉದ್ಯೋಗಿಗಳಲ್ಲಿ ಶೇ.15ರಷ್ಟು ಸಿಬ್ಬಂದಿಗಳು ಇಂಜಿನಿಯರಿಂಗ್ ವಿಭಾಗಕ್ಕೆ ಸೇರಿದ್ದಾರೆ ಎಂದು ತಿಳಿದು ಬಂದಿದೆ.