ಈ ವರ್ಷ ಭಾರತದ ಹಜ್ ಕೋಟಾ-1.75 ಲಕ್ಷ ಭಾರತೀಯರಿಗೆ ಅವಕಾಶ

ಹೊಸದಿಲ್ಲಿ ಫೆ.3 : ಈ ವರ್ಷ 1.75 ಲಕ್ಷ ಮಂದಿ ಭಾರತೀಯರು ಸೌದಿ ಅರೇಬಿಯಾ ಸರ್ಕಾರ ನಿಗದಿಪಡಿಸಿದ ಕೋಟಾ ಅಡಿಯಲ್ಲಿ ಪವಿತ್ರ ಹಜ್ ಯಾತ್ರೆಯನ್ನು ಕೈಗೊಳ್ಳಬಹುದಾಗಿದೆ.

ಕೇಂದ್ರದ ಅಲ್ಪ ಸಂಖ್ಯಾತ ವ್ಯವಹಾರಗಳ ಸಚಿವಾಲಯದ ವಿಶೇಷ ಆನ್‍ಲೈನ್ ಪೋರ್ಟೆಲ್‍ನಲ್ಲಿ ಹಜ್ ಅರ್ಜಿಗಳ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಸೌದಿ ಅರೇಬಿಯಾದ ಅಧಿಕಾರಿಗಳು ನಿಗದಿಪಡಿಸುವ ವೇಳಾಪಟ್ಟಿ ಮತ್ತು ಮಾರ್ಗಸೂಚಿಗೆ ಅನುಸಾರವಾಗಿ ಪ್ರತಿ ವರ್ಷದ ಮೇ ಅಥವಾ ಜೂನ್ ತಿಂಗಳಲ್ಲಿ ಹಜ್ ಯಾತ್ರಿಗಳ ಮೊದಲ ತಂಡ ಪ್ರಯಾಣ ಆರಂಭಿಸುತ್ತದೆ ಎಂದು ತಿಳಿದು ಬಂದಿದೆ.

ಕೋವಿಡ್-19 ಸಾಂಕ್ರಾಮಿಕದ ಕಾರಣದಿಂದಾಗಿ ನಿರ್ಬಂಧಿಸಿದ್ದ ಹಿನ್ನೆಲೆಯಲ್ಲಿ ಎರಡು ವರ್ಷಗಳ ಬಳಿಕ ಭಾರತೀಯ ಹಜ್ ಯಾತ್ರಿಗಳು ಹಜ್ ಯಾತ್ರೆ ಕೈಗೊಳ್ಳಲು ಸಾಧ್ಯವಾಗಿತ್ತು. ಅದರೆ ಸಾಂಕ್ರಾಮಿಕದ ಮುಂಜಾಗ್ರತಾ ನಿರ್ಬಂಧಗಳಿಂದಾಗಿ ಭಾರತೀಯ ಕೋಟಾವನ್ನು 79 ಸಾವಿರಕ್ಕೆ ಸೀಮಿತಗೊಳಿಸಿತ್ತು. ಇದೀಗ ಈ ವರ್ಷ ಮತ್ತೆ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ಹಜ್ ಯಾತ್ರೆ ಕೈಗೊಳ್ಳಬಹುದಾಗಿದೆ.

Leave a Reply

Your email address will not be published. Required fields are marked *

error: Content is protected !!