ಷೇರು ವಿಕ್ರಯಕ್ಕೆ ಅದಾನಿ ಎಂಟರ್ ಪ್ರೈಸಸ್ ನಿರ್ಧಾರ

ನವದೆಹಲಿ ಫೆ.2 : ಅದಾನಿ ಸಮೂಹವು 20 ಸಾವಿರ ಕೋಟಿ ರೂ. ಮೌಲ್ಯದ ಷೇರು ವಿಕ್ರಯ ಪ್ರಕ್ರಿಯೆಯನ್ನು ಹಿಂಪಡೆಯಲು ತೀರ್ಮಾಣಿಸಿದೆ ಎಂದು ವರದಿಯಾಗಿದೆ.

ವರದಿ ಪ್ರಕಾರ, ಮಾರುಕಟ್ಟೆಯಲ್ಲಿನ ಸದ್ಯದ ಸ್ಥಿತ್ಯಂತರದ ಹಿನ್ನೆಲೆಯಲ್ಲಿ ಈ ತೀರ್ಮಾಣ ಕೈಗೊಳ್ಳಲಾಗಿದ್ದು ಮೊತ್ತವನ್ನು ಹೂಡಿಕೆದಾರರಿಗೆ ಹಿಂದಿರುಗಿಸಲಾಗುವುದು ಎಂದು ಕಂಪನಿಯ ಹೇಳಿಕೆ ತಿಳಿಸಿದೆ.

ಮಾರುಕಟ್ಟೆ ಸ್ಥಿತಿಯ ಹಿನ್ನೆಲೆಯಲ್ಲಿ ಹೂಡಿಕೆದಾರರ ಸಮುದಾಯದ ಹಿತರಕ್ಷಿಸುವ ಕ್ರಮವಾಗಿ ಷೇರುಗಳ ಮುಂದುವರಿದ ಮಾರಾಟ ಕೈಬಿಡಲಾಗಿದೆ ಎಂದು ಅದಾನಿ ಎಂಟರ್‍ಪ್ರೈಸಸ್ ಲಿಮಿಟೆಡ್ ಸಂಸ್ಥೆಯು ಹೇಳಿಕೆಯಲ್ಲಿ ತಿಳಿಸಿದೆ.

ಹಿಂಡನ್ ಬರ್ಗ್ ರಿಸರ್ಚ್ ಸಂಸ್ಥೆಯು ಅದಾನಿ ಸಮೂಹದ ಕುರಿತು ವರದಿಯನ್ನು ಪ್ರಕಟಿಸಿದ ನಂತರದಲ್ಲಿ ಸಮೂಹದ ಕಂಪನಿಗಳ ಷೇರು ಮೌಲ್ಯ ಕುಸಿತ ಕಾಣುತ್ತಿದೆ. ಬುಧವಾರದ ವಹಿವಾಟಿನ ಕೊನೆಯಲ್ಲಿ, ಸಮೂಹದ ಎಲ್ಲಾ ಕಂಪನಿಗಳ ಷೇರುಮೌಲ್ಯವು ಕುಸಿತ ಕಂಡಿದೆ.
ಕಳೆದ ಐದು ವಹಿವಾಟು ದಿನಗಳಲ್ಲಿ ಸಮೂಹದ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳ ಮೌಲ್ಯವು ರೂ.7 ಲಕ್ಷ ಕೋಟಿಗಿಂತ ಹೆಚ್ಚಿನ ಕುಸಿತ ಕಂಡಿದೆ. ಅದಾನಿ ಎಂಟರ್‍ಪ್ರೈಸಸ್ ಶೇ 28.45ರಷ್ಟು, ಅದಾನಿ ಪೋಟ್ರ್ಸ್ ಆ್ಯಂಡ್ ಸ್ಟೆಷನ್ ಎಕನಾಮಿಕ್ ಜೋನ್ ಶೇ 19.69ರಷ್ಟು, ಅದಾನಿ ಟೋಟಲ್ ಗ್ಯಾಸ್ ಶೇ 10ರಷ್ಟು, ಅದಾನಿ ಗ್ರೀನ್ ಎನರ್ಜೆ ಶೇ 5.78ರಷ್ಟು, ಅದಾನಿ ವಿಲ್ಮರ್ ಶೇ 4.99ರಷ್ಟು, ಅದಾನಿ ಪವರ್ ಶೇ 4.98ರಷ್ಟು, ಅದಾನಿ ಟ್ರಾನ್ಸ್ಮಿಷನ್ ಶೇ 2.46ರಷ್ಟು ಇಳಿಕೆ ಕಂಡಿವೆ. ಅಂಬುಜಾ ಸಿಮೆಂಟ್ಸ್ ಶೇ 16.56ರಷ್ಟು, ಎಸಿಸಿ ಶೇ.6.34ರಷ್ಟು ಹಾಗೂ ಎನ್‍ಡಿಟಿವಿ ಶೇ 4.98ರಷ್ಟು ಕುಸಿದಿವೆ ಎಂದು ಮಾಧ್ಯಮ ವರದಿಯಿಂದ ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!