ಚಲಿಸುತ್ತಿದ್ದ ಗೂಡ್ಸ್ ರೈಲಿನಿಂದ ಬೇರ್ಪಟ್ಟ ಬೋಗಿಗಳು ಮುಂದೇನಾಯ್ತು ಗೊತ್ತಾ?

ಮುಲ್ಕಿ ಫೆ.2 : ಚಲಿಸುತ್ತಿದ್ದ ಗೂಡ್ಸ್ ರೈಲೊಂದರಿಂದ ಮಧ್ಯಭಾಗದಲ್ಲಿ ಬೋಗಿಗಳು ಬೇರ್ಪಟ್ಟು ಹಳಿಯಲ್ಲಿಯೇ ಬಾಕಿ ಉಳಿದ ಘಟನೆ ಹಳೆಯಂಗಡಿ ಇಂದಿರಾನಗರದ ರೈಲ್ವೇ ಗೇಟ್ ಬಳಿ ನಡೆದಿದೆ

ಪಡುಬಿದ್ರಿಯಿಂದ ಮಂಗಳೂರಿನ ಎನ್‍ಎಂಪಿಟಿ ಯತ್ತ ತೆರಳುತ್ತಿದ್ದ ಸರಕು ಹೊತ್ತ ರೈಲಿನಲ್ಲಿ ತಾಂತ್ರಿಕ ದೋಷದಿಂದಾಗಿ ಭೋಗಿಗಳು ಮಧ್ಯಭಾಗದಿಂದ ಸಂಪರ್ಕ ಕಡಿದುಕೊಂಡು ಬೇರ್ಪಟ್ಟು ರೈಲ್ವೇ ಗೇಟ್‍ನ ಬಳಿಯಲ್ಲಿ ನಿಂತಿತ್ತು. ಇದರಿಂದ ಗೇಟ್ ಸಹ ತೆರವುಗೊಳ್ಳದೇ ಇದ್ದುದರಿಂದ ನೂರಾರು ವಾಹನಗಳು ಎರಡೂ ಬದಿಯಲ್ಲಿ ಸುಮಾರು ಒಂದು ಗಂಟೆ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಯಿತು.

ಬೇರ್ಪಟ್ಟ ಸ್ಥಿತಿಯಲ್ಲಿ ಸುಮಾರು ಒಂದು ಕಿಲೋಮೀಟರ್ ಇಂಜಿನ್ ಮುಂದೆ ಚಲಿಸಿದ್ದು ನಂತರ ಸುರತ್ಕಲ್‍ನಿಂದ ತಾಂತ್ರಿಕ ತಜ್ಞರು ಬಂದು ದುರಸ್ಥಿಗೊಳಿಸಿದ ಬಳಿಕ ಗೂಡ್ಸ್ ರೈಲು ಸಂಚಾರ ಮುಂದುವರಿಸಿತು ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!