ಗೋಮಾಳ ಭೂಮಿಗಳನ್ನು ಗೋಶಾಲೆಗೆ ನೀಡಲು ಕಂದಾಯ ಸಚಿವರಿಂದ ಸಮ್ಮತಿ

ಉಡುಪಿ(ಉಡುಪಿ ಟೈಮ್ಸ್ ವರದಿ): ರಾಜ್ಯದಲ್ಲಿನ ಗೋಮಾಳ ಭೂಮಿಗಳನ್ನು ಆಯಾ ಜಿಲ್ಲೆಗಳಲ್ಲಿನ ನೋಂದಾಯಿತ ಗೋಶಾಲೆಗಳ ಬೇಡಿಕೆಗಳಿಗೆ ಅನುಸಾರವಾಗಿ ಸೂಕ್ತ ನಿಯಮಾವಳಿಗಳೊಂದಿಗೆ ನೀಡಲು ಕಂದಾಯ ಸಚಿವ ಆರ್ ಅಶೋಕ್ ಅಸ್ತು ಅಂದಿದ್ದಾರೆ.

ಇಂದು ಉಡುಪಿಯಲ್ಲಿ, ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಸಲ್ಲಿಸಿದ ಪತ್ರವನ್ನು ಸ್ವೀಕರಿಸಿ ಬಳಿಕ ಮಾತನಾಡಿದ ಅವರು, ಈ ಬಗ್ಗೆ ಪೂರ್ಣ ಸಮ್ಮತಿ ನೀಡಿದ್ದು ಅಲ್ಲದೆ ಉಡುಪಿಯಲ್ಲಿ ಲಭ್ಯವಿರುವ ಗೋಮಾಳ ಭೂಮಿಗಳ ವಿವರ ಮತ್ತು ಜಿಲ್ಲೆಯ ಗೋಶಾಲೆಗಳ ವಿವರವನ್ನು ಶೀಘ್ರ ನೀಡುವಂತೆ ಸಚಿವರು ಸೂಚಿಸಿದರು.

ಶ್ರೀಗಳ ಪರವಾಗಿ ವಾಸುದೇವ ಭಟ್ ಪೆರಂಪಳ್ಳಿ ಮತ್ತು ಎಸ್ ವಿ ಭಟ್ ಅವರು, ಸಚಿವರನ್ನು ಭೇಟಿಮಾಡಿ ಶ್ರೀಗಳ ಮನವಿ ಪತ್ರವನ್ನು ಸಚಿವರಿಗೆ ತಲುಪಿದರು. ಈ ವೇಳೆ ಸಚಿವರಿಗೆ ಶಾಲು ಹೊದಿಸಿ ಗೌರವಿಸಿದರು. ಈ ಸಂದರ್ಭ ಶಾಸಕ ರಘುಪತಿ ಭಟ್ ಉಪಸ್ಥಿತರಿದ್ದರು.

ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಸಲ್ಲಿಸಿದ ಪತ್ರದಲ್ಲಿ ರಾಜ್ಯದಲ್ಲಿ ಗೋ ಹತ್ಯಾ ನಿಷೇಧ ಕಾನೂನು ಜಾರಿಗೆ ಬಂದಿರುವುದರಿಂದ ಗೋ ರಕ್ಷಣೆಯ ಕಾರ್ಯಗಳಿಗೂ ಸರಕಾರ ಹೆಚ್ಚು ಗಮನ ಹರಿಸಬೇಕಾಗಿದೆ. ರಾಜ್ಯದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಗೋಮಾಳ ಭೂಮಿಗಳು ಅತಿಕ್ರಮಣಗೊಂಡಿವೆ. ಆದರೂ ಈಗ ಉಳಿದಿರುವ ಭೂಮಿಗಳನ್ನು ಗೋಶಾಲೆಗಳಿಗೆ ನೀಡುವುದರಿಂದ ಭೂಮಿ ಸದುದ್ದೇಶಕ್ಕೆ ಬಳಕೆಯಾಗುತ್ತದೆ ಮತ್ತು ಗೋಶಾಲೆಗಳಿಗೆ ಬಲಬಂದಾಗುತ್ತದೆ ಎಂದು ಉಲ್ಲೇಖಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!