ಅನೇಕಲ್: ಕಾರಿನ ಮೇಲೆ ಬಿದ್ದ ಕಾಂಕ್ರೀಟ್ ಲಾರಿ-ತಾಯಿ,ಮಗಳು ಸ್ಥಳದಲ್ಲೇ ಮೃತ್ಯು

ಆನೇಕಲ್  ಫೆ.2 : ಕಾರೊಂದರ ಮೇಲೆ  ಕಾಂಕ್ರೀಟ್ ಲಾರಿಯೊಂದು ಉರುಳಿಬಿದ್ದು ಕಾರಿನಲ್ಲಿದ್ದ ತಾಯಿ ಮತ್ತು ಮಗಳು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಕಗ್ಗಲಿಪುರ ಕ್ರಾಸ್ ಬಳಿ ನಡೆದಿದೆ.

 ಕಾರಿನಲ್ಲಿದ್ದ ಗಾಯತ್ರಿ ಕುಮಾರ್ ಮತ್ತು ಅವರ ಮಗಳು ಸುಮತಾ ಕುಮಾರ್ ಮೃತ ದುರ್ದೈವಿಗಳು. ಬನ್ನೇರುಘಟ್ಟದ ಸಮೀಪದಲ್ಲಿರುವ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮಗಳು ಸುಮತಾಳನ್ನು ಶಾಲೆಗೆ ಬಿಡಲು ತಾಯಿ, ಮಗಳು ಕಾರಿನಲ್ಲಿ ಹೊರಟಿದ್ದರು. ಈ ವೇಳೆ ಕಗ್ಗಲಿಪುರ ಕ್ರಾಸ್ ಬಳಿ ನಿನ್ನೆ ಬೆಳಿಗ್ಗೆ 8.30 ರ ಸುಮಾರಿಗೆ ಎದುರಿನಿಂದ ಬಂದ ಕಾಂಕ್ರೀಟ್ ಲಾರಿ ರಸ್ತೆ ತಿರುವಿನಲ್ಲಿ ನಿಯಂತ್ರಣ ತಪ್ಪಿ ಕಾರಿನ ಮೇಲೆ ಉರುಳಿ ಬಿದ್ದಿದೆ. ಪರಿಣಾಮ ಲಾರಿ ಅಡಿ ಸಿಲುಕಿ ತಾಯಿ ಮತ್ತು ಮಗಳು ಕಾರಿನಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!