ವಿಚ್ಛೇದನಕ್ಕಾಗಿ ಕೋರ್ಟ್ ಗೆ ಹೋಗಿ, ಶರಿಯಾ ಕೌನ್ಸಿಲ್‍ಗಲ್ಲ- ಮದ್ರಾಸ್ ಹೈಕೋರ್ಟ್
ಚೆನ್ನೈ ಫೆ.2 : ಮುಸ್ಲಿಂ ಮಹಿಳೆಯರು ವಿಚ್ಛೇದನ ಪಡೆಯಲು ಕೇವಲ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಬೇಕು ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.
2017ರಲ್ಲಿ ತಮ್ಮ ಪತ್ನಿಯು ಶರಿಯಾ ಕೌನ್ಸಿಲ್‍ನಿಂದ ಪಡೆದಿರುವಂಥ ವಿಚ್ಛೇದನ ಪ್ರಮಾಣ ಪತ್ರವನ್ನು ರದ್ದುಪಡಿಸಬೇಕೆಂದು ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಕೋರ್ಟ್ ಈ ಆದೇಶ ನೀಡಿದೆ. ಜತೆಗೆ, ತಮಿಳುನಾಡು ತೌಹೀದ್ ಜಮಾತ್‍ನ ಶರಿಯಾ ಕೌನ್ಸಿಲ್ ವಿತರಿಸಿದ್ದ ಖುಲಾ ಪ್ರಮಾಣಪತ್ರವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಹಾಗೂ ಈ ವಿಚಾರವಾಗಿ, ಖಾಸಗಿ ಸಂಸ್ಥೆಗಳು ನೀಡುವಂಥ ವಿಚ್ಛೇದನ (ಖುಲಾ) ಪ್ರಮಾಣ ಪತ್ರವು ಕಾನೂನಿನ ಪ್ರಕಾರ ಮಾನ್ಯತೆ ಹೊಂದಿರುವುದಿಲ್ಲ. ಆದ್ದರಿಂದ ಮುಸ್ಲಿಂ ಮಹಿಳೆಯರು ವಿಚ್ಛೇದನ ಪಡೆಯಲು ಕೇವಲ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಬೇಕೇ ಹೊರತು ಶರಿಯಾ ಕೌನ್ಸಿಲ್‍ನಂಥ ಖಾಸಗಿ ಸಂಸ್ಥೆಗಳನ್ನು ಸಂಪರ್ಕಿಸುವಂತಿಲ್ಲ ಸ್ಪಷ್ಟಪಡಿಸಿದೆ.