ನಿರಾಶದಾಯಕ ಬಜೆಟ್- ಅಶೋಕ್ ಕುಮಾರ್ ಕೊಡವೂರು

ಉಡುಪಿ ಫೆ.1 (ಉಡುಪಿ ಟೈಮ್ಸ್ ವರದಿ) : ಪಂಚರಾಜ್ಯ ಚುನಾವಣಾ ದೃಷ್ಟಿಯಲ್ಲಿಟ್ಟುಕೊಂಡ ಬಜೆಟ್ ಬಜೆಟ್ ಮಂಡನೆ ಮಾಡಲಾಗಿದ್ದು, ಇದೊಂದು ನಿರಾಶದಾಯಕ ಬಜೆಟ್ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅವರು ಹೇಳಿದ್ದಾರೆ.

ಇಂದಿನ ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಿರೀಕ್ಷೆಯಂತೆ ತೆರಿಗೆ ಮಿತಿ 3 ಲಕ್ಷಕ್ಕೆ ಏರಿಕೆ ಕಂಡಿರುವುದರಲ್ಲಿ ವಿಶೇಷತೆಯಿಲ್ಲ. ಸರಕಾರ ಪಡೆದ ಸಾಲಕ್ಕೆ ಬಡ್ಡಿಯ ಹೊರೆ ಅಧಿಕವಾಗಿ ಅದನ್ನು ಭರಿಸಲು ಯಾವುದೇ ಯೋಜನೆ ರೂಪಿಸಿಲ್ಲ. ಕರ್ನಾಟಕದ ಜನತೆ ಪ್ರವಾಹ ಹಾಗೂ ಕೋವಿಡ್ ಸಮಯದಲ್ಲಿ ಸಂಕಷ್ಟದಲ್ಲಿದ್ದಾಗ ಸ್ವಂದಿಸದ ಕೇಂದ್ರ ಸರಕಾರ ಬಜೆಟ್ ನಲ್ಲಿ ರೈತರನ್ನು ದೃಷ್ಟಿಯಲ್ಲಿಟ್ಟುಕೊಂಡು ಬದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಇರಗೊಡಿಸಿರುದನ್ನೆ ಕರ್ನಾಟಕಕ್ಕೆ ಬಹುದೊಡ್ಡ ಕೊಡುಗೆ ಎನ್ನಲಾಗದು. ಜಿಎಸ್‍ಟಿ ತೆರಿಗೆ ಮಿತಿಯನ್ನು ಕಡಿತಗೊಳಿಸದೆ ವಸ್ತುಗಳ ಬೆಲೆ ಕಡಿತಗೊಳ್ಳದು ಹಾಗೂ ವಲಯಗಳ ಉತ್ತೇಜನಕ್ಕೆ ಸಹಕಾರಿಯಾಗದು. ಇಂದಿನ ಬಜೆಟ್ ನಲ್ಲಿ ಕೆಲವು ವಲಯಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!