ನಾಟಕದ ಮೂಲಕ ಭಾಷೆಗಳಿಗೆ ಪ್ರಾಧ್ಯಾನತೆ : ರಾಧಾಕೃಷ್ಣ ಶ್ರೀಯಾನ್

ಉಡುಪಿ ಫೆ.1 : ನಿರಂತರ್ ಉದ್ಯಾವರ ಸಂಘಟನೆ ನೇತೃತ್ವದಲ್ಲಿ ಉದ್ಯಾವರದಲ್ಲಿ ನಡೆಯುತ್ತಿರುವ ಏಳು ದಿನದ ಬಹುಭಾಷಾ ನಾಟಕೋತ್ಸವದ ದ್ವಿತೀಯ ದಿನದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಎರಡನೇ ದಿನದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಶ್ರೀಯಾನ್ ಅವರು, ನಿರಂತರ ಉದ್ಯಾವರ ಸಂಘಟನೆಯ ಮೂಲಕ ಈಗ ನಾಟಕಗಳು ಈ ಭಾಗದಲ್ಲಿ ಪ್ರಖ್ಯಾತಿಯನ್ನು ಪಡೆದಿವೆ. ವಿವಿಧ ಭಾಷೆ ನಾಟಕಗಳನ್ನು ಪ್ರಸ್ತುತಪಡಿಸುವ ಮೂಲಕ ವಿವಿಧ ಭಾಷೆಗಳಿಗೆ ಪ್ರಾಧಾನ್ಯತೆ ನೀಡುವ ಕೆಲಸವನ್ನು ನಿರಂತರ್ ಸಂಘಟನೆ ಮಾಡುತ್ತಿದೆ ಎಂದರು.

ಸಭಾ ಕಾರ್ಯಕ್ರಮದ ಬಳಿಕ ದಿ. ಲುವಿಸ್ ಪಿಂಟೋ ಸ್ಮರಣಾರ್ಥ ಅವರ ಪತ್ನಿ ವೆರೋನಿಕ ಪಿಂಟೊ ಮತ್ತು ಮಕ್ಕಳು ಪಾಂಬೂರು ಇವರು ಪ್ರಾಯೋಜಕತ್ವ ಮಾಡಿದ ಗಣೇಶ್ ರಾವ್ ಎಲ್ಲೂರು ನಿರ್ದೇಶನದ ಶಂಕರಪುರದ ಕಲಾರಾಧನೆ ಸಂಸ್ಥೆಯ ಕೊಂಕಣಿ ನಾಟಕ ಕಾಮಿಲ್ ಕಾಲ್ವಾರ್ ಪ್ರದರ್ಶನಗೊಂಡಿತು. 500ಕ್ಕೂ ಅಧಿಕ ಕಲಾಭಿಮಾನಿಗಳು ನಾಟಕವನ್ನು ವೀಕ್ಷಿಸಿದರು.

ಈ ಸಂದರ್ಭದಲ್ಲಿ ಸಾಂಸ್ಕøತಿಕ ಸಂಸ್ಥೆ ಪರಿಚಯ ಮತ್ತು ಕಲಾರಾಧನ್ ಇದರ ಅಧ್ಯಕ್ಷರಾಗಿರುವ ಅನಿಲ್ ಡೆಸಾ ಶಂಕರಪುರ, ಲಯನ್ಸ್ ಕ್ಲಬ್ ಬಂಟಕಲ್ ಬಿ.ಸಿ ರೋಡ್ ಇದರ ಅಧ್ಯಕ್ಷ ಲ. ವಿಲ್ಫ್ರೆಡ್ ಪಿಂಟೊ, ರಂಗ ನಿರ್ದೇಶಕ ಗಣೇಶ್ ರಾವ್ ಎಲ್ಲೂರು, ನಾಟಕೋತ್ಸವ ಸಂಚಾಲಕ ರೊನಾಲ್ಡ್ ಡಿಸೋಜಾ, ನಿರಂತರ್ ಸಂಘಟನೆಯ ಅಧ್ಯಕ್ಷ ರೋಷನ್ ಕ್ರಾಸ್ತಾ, ಕಾರ್ಯದರ್ಶಿ ಒಲಿವೇರಾ ಮತಾಯಸ್, ರೋಷನ್ ಡಿಸೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!