ಬೈಂದೂರು: ಮಹಿಳೆಗೆ ಪತಿ ಹಾಗೂ ಬಾವನಿಂದ ಹಲ್ಲೆ, ಬೆದರಿಕೆ- ದೂರು ದಾಖಲು

ಬೈಂದೂರು ಜ.31 (ಉಡುಪಿ ಟೈಮ್ಸ್ ವರದಿ): ಉಪ್ಪುಂದ ಗ್ರಾಮದ ಅಮ್ಮನವರ ತೊಪ್ಪಲು ಎಂಬಲ್ಲಿ ಮಹಿಳೆಯೊಬ್ಬರಿಗೆ ಗಂಡ ಹಾಗೂ ಆತನ ಅಣ್ಣ ನಿಂದಿಸಿ, ಹಲ್ಲೆ ನಡೆಸಿ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿರುವ ಬಗ್ಗೆ ಬೈಂದೂರು ಠಾಣೆಯಲ್ಲಿ ದೂರು ದಾಖಲಾಗಿದೆ.

ಸ್ಥಳೀಯ ನಿವಾಸಿ ಶೈಲಜಾ ಎಂಬವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ತಮ್ಮ ಗಂಡ ಸಂತೋಷ ಬಿಲ್ಲವ ಮತ್ತು ಆತನ ಅಣ್ಣ ರಾಘವೇಂದ್ರ ಅವಾಚ್ಯ ಶಬ್ದಗಳಿಂದ ಬೈದು, ಹೊಡೆದು ಹಲ್ಲೆ ಮಾಡಿ ಮಾನಸಿಕ ದೈಹಿಕಹಿಂಸೆ ನೀಡಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!