ಉಡುಪಿ: ಪೇಟಿಎಮ್ ಪಾಸ್ಟ್ ಟ್ಯಾಗ್ ಸರಿಪಡಿಸುವ ನೆಪದಲ್ಲಿ ವ್ಯಕ್ತಿಗೆ ರೂ.99,997 ವಂಚನೆ

ಉಡುಪಿ ಜ.31 (ಉಡುಪಿ ಟೈಮ್ಸ್ ವರದಿ): ಪೇ ಟಿಎಮ್ ಪಾಸ್ಟ್ ಟ್ಯಾಗ್ ಸರಿಪಡಿಸುವ ನೆಪದಲ್ಲಿ ವ್ಯಕ್ತಿಯೊಬ್ಬರಿಗೆ ಅಧಿಕಾರಿಯ ಸೋಗಿನಲ್ಲಿ ಅಪರಿಚಿತ ವ್ಯಕ್ತಿ 99 ಸಾವಿರ ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಜ.29 ರಂದು ಫ್ರಾನ್ಸಿಸ್ ಪಿಯುಸ್ ಪುಟಾರ್ಡೋ ಎಂಬವರು ತಮ್ಮ ಪೇ ಟಿಎಮ್ ಪಾಸ್ಟ್ ಟ್ಯಾಗ್ ನಿಷ್ಕ್ರೀಯಾಗೊಂಡ ಕಾರಣ ಅದರನ್ನು ಸರಿಪಡಿಸುವ ಸಲುವಾಗಿ ಗೂಗಲ್ ನಲ್ಲಿ ಪೇ.ಟಿ.ಎಂ. ಫಾಸ್ಟ್ ಟ್ಯಾಗ್ ಎಪ್ಲಿಕೇಶನ್ ನ್ನು ಹುಡುಕಿ ಗೂಗಲ್ ನಲ್ಲಿ ಪೇ.ಟಿ.ಎಂ. ಹೆಲ್ಪ್ ಮತ್ತು ಸಪೋರ್ಟ್ ನಲ್ಲಿ ಕಂಡುಬಂದ ಮೊಬೈಲ್ ನಂಬರ್ ಗೆ ಕರೆ ಮಾಡಿದ್ದರು. ಇವರ ಕರೆಯನ್ನು ಸ್ವೀಕರಿಸಿದ ವ್ಯಕ್ತಿ ತಾನು ಪೇ.ಟಿ.ಎಂ. ಫಾಸ್ಟ್ ಟ್ಯಾಗ್ ವೆಬ್‍ಸೈಟ್ ನ ಅಧಿಕಾರಿ ಎಂದು ನಂಬಿಸಿ, ಇವರ ಪೇಟಿಎಮ್ ಪಾಸ್ಟ್ ಟ್ಯಾಗ್ ಸರಿಪಡಿಸಿ ಕೊಡುವುದಾಗಿ ಹೇಳಿದ್ದಾನೆ. ಮಾತ್ರವಲ್ಲದೆ ಇವರಿಂದ ಮೊಬೈಲ್ ಗೆ ಬಂದ ಓ.ಟಿ.ಪಿ ಪಡೆದು ಇವರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಒಟ್ಟು ಒಟ್ಟು ರೂ.99,997 ನಗದನ್ನು ಆನ್ ಲೈನ್ ಮುಖೇನ ವರ್ಗಾವಣೆ ಮಾಡಿ ವಂಚಿಸಿದ್ದಾನೆ ಎಂಬುದಾಗಿ ಫ್ರಾನ್ಸಿಸ್ ಪಿಯುಸ್ ಪುಟಾರ್ಡೋ ಅವರು ನೀಡಿದ ದೂರಿನಂತೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!