ಉಡುಪಿ: ಶ್ರೀಗಂಧದ ಮರ ಕಳವು-ಆರೋಪಿ ಬಂಧನ

ಉಡುಪಿ ಜ.31 (ಉಡುಪಿ ಟೈಮ್ಸ್ ವರದಿ): ನಗರದ ಅಂಬಲಪಾಡಿಯ ಶ್ಯಾಮಿಲಿ ಸಭಾಭವನದ ಸಮೀಪ ಶ್ರೀಗಂಧದ ಮರವನ್ನು ಕಡಿದು, ಕಳವು ಮಾಡುತ್ತಿದ್ದ ಆರೋಪಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಮೂಡುಬೆಳ್ಳ ನಿವಾಸಿ ಅಶೋಕ ಬಂಧಿತ ಆರೋಪಿ. ಆರೋಪಿಯಿಂದ ಸುಮಾರು 43 ಕೆ.ಜಿ. ಹಸಿ ಶ್ರೀಗಂಧವನ್ನು ಹಾಗೂ ಶ್ರೀಗಂಧದ ಮರ ಕಡಿಯಲು ಬಳಸಿದ್ದ ಮಾರಕಾಯುಧವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಉಡುಪಿಯ ಅಂಬಲಪಾಡಿಯ ಶ್ಯಾಮಿಲಿ ಸಭಾಭವನದ ಸಮೀಪ ಶ್ರೀಗಂಧದ ಮರವನ್ನು ಆರೋಪಿಯೋರ್ವ ಕಡಿಯುತ್ತಿದ್ದಾನೆ ಎಂದು ಖಚಿತ ಮಾಹಿತಿ ಪಡೆದ ರಾತ್ರಿ ಗಸ್ತು ಪಾಳಿಯ ಕರ್ತವ್ಯದಲ್ಲಿದ್ದ ಅರಣ್ಯ ಪಾಲಕ ಎಚ್. ದೇವರಾಜ ಪಾಣ, ಅಭಿಲಾಷ್ ಎಸ್.ಬಿ.,ಮತ್ತು ವಿತೇಶ್ ರೊಂದಿಗೆ ಉಡುಪಿ ಕೇಂದ್ರಸ್ಥಾನದ ಪ್ರಭಾರ ಉಪ ವಲಯ ಅರಣ್ಯ ಅಧಿಕಾರಿಯವರಾದ ಕೇಶವ ಪೂಜಾರಿ ಎಂ. ರವರು ಜ.25 ರ ತಡರಾತ್ರಿ ಸ್ಥಳಕ್ಕೆ ತೆರಳಿ ಆರೋಪಿ ಅಶೋಕ ಎಂಬಾತನನ್ನು ವಶಕ್ಕೆ ಪಡೆದು ಆತನ ಬಳಿ ಇದ್ದ 43.00 ಕೆಜಿ ಹಸಿ ಶ್ರೀ ಗಂಧವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!