ಡಯಾಲಿಸಿಸಿ ಪೇಷಂಟ್ ಗೆ ಆಸರೆಯಾದ ಉಡುಪಿಯ ಯಶೋದ ಆಟೋ ಯೂನಿಯನ್

ಉಡುಪಿ ಜ.31 (ಉಡುಪಿ ಟೈಮ್ಸ್ ವರದಿ): ಕಿಡ್ನಿ ಸಮಸ್ಯೆಗೆ ತುತ್ತಾಗಿ ಚಿಕಿತ್ಸೆಗೆ ದಾಖಲಾಗಿ ಅಸಾಹಯಕ ಸ್ಥಿತಿಯಲ್ಲಿ ಇದ್ದ ವ್ಯಕ್ತಿಗೆ ಸಹಕಾರ ನೀಡುವ ಮೂಲಕ ಯಶೋದ ಆಟೋ ಚಾಲಕರ ಮತ್ತು ಮಾಲಕರ ಸಂಘದ ಸದಸ್ಯರು ಮಾನವೀಯತೆ ಮೆರೆದಿದ್ದಾರೆ.

ಕಿಡ್ನಿ ಸಮಸ್ಯೆಗೆ ತುತ್ತಾಗಿ ಡಯಾಲಿಸಿಸ್ ಗೆ ಹೋಗಲು ಸಾಧ್ಯವಾಗದೆ ಅಸಾಹಯಕ ಸ್ಥಿತಿಯಲ್ಲಿ ಇದ್ದ ಕಡಿಯಾಳಿ ನಿವಾಸಿ ಸುರೇಶ್ ಸೇರಿಗಾರ್ ರವರಿಗೆ ಯಶೋಧ ಆಟೋ ಯೂನಿಯನ್ ವತಿಯಿಂದ ಆಟೋ ವ್ಯವಸ್ಥೆವನ್ನು ಮಾಡಲಾಗಿದೆ.

ಈ ಉಚಿತ ಸೇವೆಗೆ ಅಧಿಕೃತವಾಗಿ ಚಾಲನೆಯನ್ನು ಯೂನಿಯನ್ ನ ಜಿಲ್ಲಾ ಅಧ್ಯಕ್ಷರಾದ ಶ್ರೀ ಕೆ.ಕೃಷ್ಣ ಮೂರ್ತಿ ಆಚಾರ್ಯ ಚಾಲನೆ ನೀಡಿದರು.

ಈ ವೇಳೆ ಮಾತಾಡಿದ ಕೆ ಕೃಷ್ಣಮೂರ್ತಿ ಆಚಾರ್ಯ ರವರು, ನಮ್ಮ ಯೂನಿಯನ್ ಕೊರೋನಾ ಸಂದರ್ಭ ದಲ್ಲಿ 37 ಆಟೋಗಳು 69 ದಿನ ಉಚಿತ ಸೇವೆಯನ್ನು ಹಾಗೂ ಅಜ್ಜರ ಕಾಡು ಆಸ್ಪತ್ರೆಯಿಂದ ಕೊಕ್ಕರ್ಣೆಗೆ ವಾರಕ್ಕೆರಡು ಬಾರಿ ಡಯಾಲಿಸಿಸ್ ಪೇಷಂಟ್ ಗೀತಾ ಸೂರಲ್ ರನ್ನು ಒಂದು ವರ್ಷದಿಂದ ಉಚಿತವಾಗಿ ಬಿಡುತ್ತಿದ್ದು ಮತ್ತು ಕಕ್ಕುಂಜೆ ಶಾಲೆಯ ಮಕ್ಕಳಿಗೆ ಮನೆಯಿಂದ ಶಾಲೆಗೆ ಹೋಗಲು ಶಾಲೆಯಿಂದ ಮನೆಗೆ ಬರಲು ಒಂದು ವರ್ಷದಿಂದ ಉಚಿತ ಆಟೋ ಸೇವೆ ನೀಡುತ್ತಿದ್ದು ಇನ್ನೂ ಕೂಡ ಹಲವಾರು ಸಮಾಜಮುಖಿ ಕಾರ್ಯಗಳು ಮಾಡಲಾಗುತ್ತಿದೆ. ಯೂನಿಯನ್ ನ ಈ ಕಾರ್ಯಕ್ಕೆ ಸಂಘ ಸಂಸ್ಥೆಯಿಂದ ಮತ್ತು ಜನರಿಂದ ಮೆಚ್ಚುಗೆ ಪಡೆದಿರುತ್ತೇವೆ.

ಈ ಸಂದರ್ಭದಲ್ಲಿ ಮಹಿಷಮರ್ದಿನಿ ಲ್ಯಾಂಡ್ ಲಿಂಕ್ಸ್ ಮಾಲಕರದ ಭಾಸ್ಕರ್ ಸೇರಿಗಾರ್, ಹೋಂ ಡಾಕ್ಟರ್ ಫೌಂಡೇಶನ್ ಸುಜಯ್ ಶೆಟ್ಟಿ, ಉದಯ್ ನಾಯ್ಕ್, ಬಂಗಾರಪ್ಪ, ಕೃಷ್ಣಮೂರ್ತಿ ಅಭಿಮಾನಿ ಬಳಗದ ಅಧ್ಯಕ್ಷರಾದ ಚರಣ್ ರಾಜ್ ಬಂಗೇರ, ಯಶೋಧ ಆಟೋ ಯೂನಿಯನ್ ನ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಪ್ರವೀಣ್ ಕುಂಜಿಬೆಟ್ಟು, ಜೊತೆ ಕಾರ್ಯದರ್ಶಿ ಹರೀಶ್ ಅಮೀನ್, ಜಿಲ್ಲಾ ಕೋಶಾಧಿಕಾರಿ ಶ್ರೀನಿವಾಸ ಕಪ್ಪೆಟ್ಟು ಮತ್ತು ತಾಲೂಕು ಅಧ್ಯಕ್ಷ ಉದಯ್ ಪಂದು ಬೆಟ್ಟು, ತಾಲೂಕು ಉಪಾಧ್ಯಕ್ಷ ಸಂತೋಷ್ ಸೇರಿಗಾರ್ , ರವಿ ಸೇರಿಗಾರ್ ಸುಧಾಕರ್ ಪರ್ಕಳ, ಕೃಷ್ಣರಾಜ್ ಕೊರಂಗ್ರಪಾಡಿ, ಪುರುಷೋತ್ತಮ್ ನಾಯಕ್, ಸತೀಶ್ ಮಣಿಪಾಲ್ ಉಪಸ್ಥಿತರಿದ್ದರು

ಉಡುಪಿಯ ಕಡಿಯಾಳಿಯಲ್ಲಿ ವಾಸಿಸುತ್ತಿರುವ ಸುರೇಶ್ ಸೇರಿಗಾರ್ ರವರಿಗೆ ಅನಾರೋಗ್ಯ ಉಂಟಾಗಿ ಕಿಡ್ನಿ ಸಮಸ್ಯೆಗೆ ತುತ್ತಾಗಿದ್ದರು. ಅವರಿಗೆ ವಾರದಲ್ಲಿ ಎರಡು ದಿನ ಮಂಗಳವಾರ ಮತ್ತು ಶುಕ್ರವಾರ ಡಯಾಲಿಸಿಸ್ ನ ಅಗತ್ಯವಿದ್ದು ಬಡತನದಲ್ಲಿ ಜೀವನ ಸಾಗಿಸುತ್ತಿದ್ದ ಅವರಿಗೆ ವಾರಕ್ಕೆ ಎರಡು ಬಾರಿ ಬಂದು ಹೋಗಲು ಅಸಾಧ್ಯ ಹಾಗೂ ಖರ್ಚು ನಿರ್ವಹಿಸಲೂ ಅಸಾಧ್ಯವಾಗಿತ್ತು. ಆದ್ದರಿಂದ ಕೆಲ ದಿನಗಳ ಹಿಂದೆ ಹೋಂ ಡಾಕ್ಟರ್ ಫೌಂಡೇಶನ್ ನ ಡಾ.ಶಶಿಕಿರಣ್ ಶೆಟ್ಟಿ ಅವರು ಸುರೇಶ್ ಅವರಿಗೆ ವರ್ಷ ಪೂರ್ತಿ ಉಡುಪಿಯ ಕುಂಜಿಬೆಟ್ಟು ಕಡಿಯಾಳಿ ಮನೆಯಿಂದ ಕೆಎಂಸಿ ಆಸ್ಪತ್ರೆಗೆ ಮತ್ತು ಡಯಾಲಿಸಿಸಿ ಆದಮೇಲೆ ವಾಪಾಸ್ ಕುಂಜಿಬೆಟ್ಟು ಮನೆಗೆ ಕರೆದುಕೊಂಡು ಬರಲು ಸಹಕಾರ ನೀಡುವಂತೆ ಯಶೋದ ಆಟೋ ಸಂಘದ ಬಳಿ ಕೇಳಿಕೊಂಡಿದ್ದರು. ಅದರಂತೆ ಇದೀಗ ಸುರೇಶ್ ಸೇರಿಗಾರ್ ಅವರಿಗೆ ಉಚಿತ ಆಟೋ ಸೇವೆ ಲಭ್ಯವಾಗಿದೆ.

Leave a Reply

Your email address will not be published. Required fields are marked *

error: Content is protected !!