ಕಾರ್ಕಳ: ಕೆ.ಎಸ್.ಆರ್.ಟಿ.ಸಿ-ಖಾಸಗಿ ಬಸ್ ಸಿಬ್ಬಂದಿಗಳ ಹೊಡೆದಾಟ-ಪ್ರಯಾಣಿಕರ ಪರದಾಟ

ಕಾರ್ಕಳ ಜ.30 : ಇಲ್ಲಿನ ಬಸ್ ನಿಲ್ದಾಣದಲ್ಲೇ ಸರಕಾರಿ ಬಸ್ ಚಾಲಕ ಮತ್ತು ಖಾಸಗಿ ಬಸ್ ನಿರ್ವಾಹಕ ನಡುವೆ ಜಗಳ ನಡೆದು ಇಬ್ಬರೂ ಹೊಡೆದಾಡಿಕೊಂಡಿರುವ ಘಟನೆ ಇಂದು ನಡೆದಿದೆ.

ಬಸ್‍ಗೆ ಸೈಡ್ ಕೊಡುವ ವಿಚಾರದಲ್ಲಿ ಸರಕಾರಿ ಬಸ್ ಚಾಲಕ ಮೊಹಮ್ಮದ್ ಸೈಯದ್ ಮತ್ತು ಖಾಸಗಿ ಬಸ್ ಕಂಡಕ್ಟರ್ ನಡುವೆ ಈ ಹೊಡೆದಾಟ ನಡೆದಿದೆ. ಈ ವೇಳೆ ಸರಕಾರಿ ಬಸ್ ಚಾಲಕನಿಗೆ ಖಾಸಗಿ ಬಸ್ ಕಂಡಕ್ಟರ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಕೋಪಗೊಂಡ ಚಾಲಕ ಸೈಯಸ್, ಖಾಸಗಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದಾನೆ ಬಳಿಕ ಇಬ್ಬರೂ ಹೊಡೆದಾಡಿಕೊಂಡಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಕೆಲಕಾಲ ಬಸ್ಸಿಗಾಗಿ ಕಾಯುತ್ತಿದ್ದ ಪ್ರಯಾಣಿಕರು ಪರದಾಡುವಂತಾಗಿತ್ತು.

ಇದೀಗ ಇವರಿಬ್ಬರು ಹೊಡೆದಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

1 thought on “ಕಾರ್ಕಳ: ಕೆ.ಎಸ್.ಆರ್.ಟಿ.ಸಿ-ಖಾಸಗಿ ಬಸ್ ಸಿಬ್ಬಂದಿಗಳ ಹೊಡೆದಾಟ-ಪ್ರಯಾಣಿಕರ ಪರದಾಟ

  1. Better you find the name of KSRTC bus driver. Why don’t you try to find out the name of private bus conductor?

Leave a Reply

Your email address will not be published. Required fields are marked *

error: Content is protected !!