ಎಲ್.ಐ.ಸಿ ಗ್ರಾಹಕರ ಖಾತೆಗಳಲ್ಲಿದ್ದ 4.92 ಕೋಟಿ ರೂ. ವರ್ಗಾವಣೆ- ಬ್ಯಾಂಕ್ ನ ಅಧಿಕಾರಿಯ ಬಂಧನ

ಬೆಂಗಳೂರು ಜ.30 : ಎಲ್.ಐ.ಸಿ ಗ್ರಾಹಕರ ಖಾತೆಗಳಲ್ಲಿದ್ದ 4.92 ಕೋಟಿ ರೂ. ಗೂ ಅಧಿಕ ಹಣವನ್ನು ಅಕ್ರಮವಾಗಿ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡು, ಎಲ್‍ಐಸಿ ಬಾಂಡ್‍ಗಳ ಖರೀದಿ ಮಾಡಿ ವಂಚಿಸಿರುವ ಐಡಿಬಿಐ ಬ್ಯಾಂಕ್ ನ ರಿಲೇಷನ್ ಶಿಪ್ ಮ್ಯಾನೇಜರ್ ಸುಚೀಲಾ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐಬಿಬಿಐ ಬ್ಯಾಂಕ್‍ನ ಡೆಪ್ಯುಟಿ ಜನರಲ್ ಮ್ಯಾನೇಜರ್ ಸಂಗಮೇಶ್ವರ ಅವರು, ಸುಚೀಲಾ ಅವರು ಗ್ರ್ರಾಹಕರ ಖಾತೆಗಳಿಂದ ಅಕ್ರಮವಾಗಿ ಹಣ ವರ್ಗಾವಣೆ ಮಾಡಿ ಬ್ಯಾಂಕ್ ಗೆ ವಂಚನೆ ಮಾಡಿದ್ದಾರೆ ಎಂದು ಸಂಪಂಗಿರಾಮನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಇದರನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡ ಐಡಿಬಿಐ ಬ್ಯಾಂಕ್ ನ ರಿಲೇಷನ್ ಶಿಪ್ ಮ್ಯಾನೇಜರ್ ಸುಚೀಲಾ (34) ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಹಾಗೂ ಆರೋಪಿ ಕೆಲಸ ಮಾಡುತ್ತಿದ್ದ ಮಿಷನ್ ರಸ್ತೆಯ ಶಾಖೆಯ ಕಂಪ್ಯೂಟರ್ ಹಾಗೂ 23 ಲಕ್ಷ ಮೊತ್ತ ಒಂದು ಬಾಂಡ್ ಅನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಾಗೂ ಹುನಸೆಮಾರೇನಹಳ್ಳಿಯ ಭಾರತಿನಗರದಲ್ಲಿ ವಾಸವಾಗಿದ್ದ ಆರೋಪಿ ನಗರದ ಮಿಷನ್ ರಸ್ತೆಯ ಐಡಿಬಿಐ ಶಾಖೆಯಲ್ಲಿ ರಿಲೇಶನ್ ಮ್ಯಾನೇಜರ್ ಆಗಿ 2022ರ ಜೂನ್ 13 ರಿಂದ ಡಿ.31 ರವರೆಗೆ ಇಲ್ಲಿ ಕಾರ್ಯನಿರ್ವಹಿಸಿದ್ದಳು. ಈ ಸಮಯದಲ್ಲಿ ಗ್ರಾಹಕರ ಖಾತೆಗಳಿಂದ ಅವರ ಅರಿವಿಗೆ ಬಾರದಂತೆ ಹಣವನ್ನು ತೆಗೆದು ಅದನ್ನು ಎಲ್.ಐ.ಸಿ ಬ್ಯಾಂಕ್ ಗಳಲ್ಲಿ ತೊಡಗಿಸಿ ಸುಮಾರು 1,44,48,649 ರೂ. ವರ್ಗಾವಣೆ ಮಾಡಿಕೊಂಡಿದ್ದಳು. ಈ ಹಿಂದೆ ಗಾಂಧಿನಗರ ಶಾಖೆಯಲ್ಲೂ ಇದೇ ರೀತಿ ವರ್ಗಾವಣೆ ಮಾಡಿದ್ದ ಹಣವನ್ನು ಸರಿದೂಗಿಸಲು 23-12-2022ರಲ್ಲಿ ಒಂದೇ ದಿನ 4.92 ಕೋಟಿ ರೂ., ಬೇರೆ ಬೇರೆ ಖಾತೆಗೆ ವರ್ಗಾವಣೆ ಮಾಡಿ ಮೋಸ ಮಾಡಿರುವುದು ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!