ನೇತಾಜಿ ಸೇವಾ ವೇದಿಕೆ ನಾಲ್ಕೂರು ವತಿಯಿಂದ ನೇತಾಜಿಯವರ 125 ನೇ ಜನ್ಮದಿನಾಚರಣೆ
ಉಡುಪಿ(ಉಡುಪಿ ಟೈಮ್ಸ್ ವರದಿ):ನೇತಾಜಿ ಸೇವಾ ವೇದಿಕೆ ನಾಲ್ಕೂರು ಇದರ ವತಿಯಿಂದ ನೇತಾಜಿಯವರ 125 ನೇ ಜನ್ಮದಿನಾಚರಣೆ ಹಾಗೂ ನೇತಾಜಿ ಸೇವಾ ವೇದಿಕೆ ಇದರ 11ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಇಂದು (ಜ 23 ) ರಂದು ಮುದ್ದೂರಿನ ಶ್ರೀ ಮಹಾಗಣಪತಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಿತು.
ಶಾಸಕ ಕೆ. ರಘುಪತಿ ಭಟ್ ಭಾಗವಹಿಸಿ ಶುಭ ಹಾರೈಸಿದರು. ಸಭೆಯಲ್ಲಿ ಆಶಾ ಕಾರ್ಯಕರ್ತೆಯರನ್ನು ಹಾಗೂ ನಿವೃತ್ತ ಸೈನಿಕ ರಾಘವೇಂದ್ರ ನಾಯ್ಕ, ವೈದ್ಯಾಧಿಕಾರಿಗಳಾದ ಡಾ. ಸುರೇಶ್ ನಾಯಕ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಪ್ರತಾಪ್ ಹೆಗ್ಡೆ ಮಾರಾಳಿ, ನೇತಾಜಿ ಸೇವಾ ವೇದಿಕೆ ಅಧ್ಯಕ್ಷರಾದ ಪ್ರಕಾಶ್ ನಾಯ್ಕ, ಭಾರತೀಯ ಸೇನೆ ಮಾಜಿ ಲೆಫ್ಟಿನೆಂಟ್ ಕರ್ನಲ್ ಕೃಷ್ಣಯ್ಯ ಶೆಟ್ಟಿ ಮಿಯ್ಯಾರು, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಎನ್. ಕರುಣಾಕರ ಶೆಟ್ಟಿ ಕಜ್ಕೆ, ನಾಲ್ಕೂರು ಪಂಚಾಯತ್ ಮಾಜಿ ಅಧ್ಯಕ್ಷರಾದ ಸಂತೋಷ್ ಹೆಗ್ಡೆ ಮಾರಾಳಿ, ಸುಪ್ರೀತಾ ಕ್ಯಾಶ್ಯೂಸ್ ಮಾಲಕರಾದ ಕಾಶಿನಾಥ ಶೈಣೆ ಕಜ್ಕೆ, ಶಿಕ್ಷಕರಾದ ಶಶಿಧರ್ ಶೆಟ್ಟಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.