ಜೇಸಿಐ ರಾಷ್ಟ್ರ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ನಿಧಿ ಶೆಟ್ಟಿ ಪುಳಿಂಚ ಪ್ರಥಮ ಸ್ಥಾನ
ಮಂಗಳೂರು(ಉಡುಪಿ ಟೈಮ್ಸ್ ವರದಿ) : ಜೇಸಿಐ ಭಾರತದ 65ನೇ ರಾಷ್ಟ್ರೀಯ ಅಧಿವೇಶನದ ಪ್ರಯುಕ್ತ ಯುವ ಜೇಸಿ ಸದಸ್ಯರಿಗಾಗಿ ಆನ್ ಲೈನ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರ ಮಟ್ಟದ ಪ್ರತಿಭಾನ್ವೇಷಣಾ ಭಾಷಣ ಸ್ಪರ್ಧೆಯಲ್ಲಿ ಜೇಸಿಐ ಮಂಗಳೂರು ಇಂಪ್ಯಾಕ್ಟ್ ಘಟಕದ ಪ್ರತಿನಿಧಿಯಾಗಿ ಭಾಗವಹಿಸಿದ್ದ ನಿಧಿ ಶೆಟ್ಟಿ ಪುಳಿಂಚ ಅವರು ಪ್ರಥಮ ಸ್ಥಾನ ಗಳಿಸಿದ್ದಾರೆ.
ರಾಷ್ಟ್ರ ಮಟ್ಟದ ಪ್ರತಿಭಾನ್ವೇಷಣಾ ಭಾಷಣ ಸ್ಪರ್ಧೆಯಲ್ಲಿ ಜೇಸಿಐ ಮಂಗಳೂರು ಇಂಪ್ಯಾಕ್ಟ್ ಘಟಕದ ಪ್ರತಿನಿಧಿಯಾಗಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ ನಿಧಿ ಶೆಟ್ಟಿ ಪುಳಿಂಚ ಅವರನ್ನು ಜೇಸಿಐ ಮಂಗಳೂರು ಇಂಪ್ಯಾಕ್ಟ್ ಮತ್ತು ಜೇಸಿಐ ಮಂಗಳೂರು ಇನ್ ಸ್ಪೈರ್ ಘಟಕದ ವತಿಯಿಂದ ಜಂಟಿಯಾಗಿ ಸನ್ಮಾನಿಸಲಾಯಿತು.
ಜೇಸಿಐ ಮಂಗಳೂರು ಇಂಪ್ಯಾಕ್ಟ್ ಘಟಕದ ಸ್ಥಾಪಕಾಧ್ಯಕ್ಷ ದೀಪಕ್ ಗಂಗೂಲಿ, 2020ರ ಅಧ್ಯಕ್ಷ ಸೂರಜ್ ಆರ್. ಶೆಟ್ಟಿ, ಮಂಗಳೂರು ಇನ್ ಸ್ಫೈರ್ ಘಟಕದ ಸ್ಥಾಪಕಾಧ್ಯಕ್ಷೆ ಸಾರಿಕಾ ಪೂಜಾರಿ, ಕೋಶಾಧಿಕಾರಿ ಪ್ರಾರ್ಥನಾ, ನಿಧಿ ಶೆಟ್ಟಿ ಅವರ ಹೆತ್ತವರಾದ ಶ್ರೀಧರ ಶೆಟ್ಟಿ ಪುಳಿಂಚ, ಪ್ರತಿಭಾ ಶೆಟ್ಟಿ ಪುಳಿಂಚ, ಸಹೋದರ ನಿನಾದ್ ಶೆಟ್ಟಿ ಉಪಸ್ಥಿತರಿದ್ದರು.
ಮಂಗಳೂರು ಬೆಂದೂರು ಸೈಂಟ್ ತೆರೆಸಾ’ಸ್ ಸ್ಕೂಲ್ ನ ಎಂಟನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಈಕೆ ವಲಯ ಮಟ್ಟದಲ್ಲಿ ಆಯೋಜಿಸಲಾಗಿದ್ದ ಅರ್ಹತಾ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿ, ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದರು.
ಪ್ರಸ್ತುತ ಗುಜರಾತ್ ನ ವಡೋಧರಾದಲ್ಲಿ ನಡೆಯುತ್ತಿರುವ 65 ನೇ ರಾಷ್ಟ್ರೀಯ ಸಮ್ಮೇಳನದ ಪ್ರಯುಕ್ತ ಆನ್ ಲೈನ್ ಮೂಲಕ ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ದೇಶದ ವಿವಿಧೆಡೆಗಳಿಂದ ಯುವ ಜೇಸಿ ಸದಸ್ಯರು ಭಾಗವಹಿಸಿದ್ದರು.