ಮಂಗಳೂರು: ತಲೆಕೂದಲು, ಮೀಸೆ ಬೋಳಿಸುವಂತೆ ರಾಗಿಂಗ್ ,9 ವಿದ್ಯಾರ್ಥಿಗಳ ಬಂಧನ

ಮಂಗಳೂರು: ತಲೆಕೂದಲು, ಮೀಸೆ ಬೋಳಿಸುವಂತೆ ರ್‍ಯಾಗಿಂಗ್ ಮಾಡಿದ ಖಾಸಗಿ ಕಾಲೇಜಿನ 9 ಮಂದಿ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ ಘಟನೆ ಮಂಗಳೂರಿನ ಲ್ಲಿ ನಡೆದಿದೆ.
 ಜಿಷ್ಣು (20), ಶ್ರೀಕಾಂತ್ (20), ಅಶ್ವಥ್ (20), ಸಾಯಿನಾಥ್ (22), ಅಭಿರತ್ ರಾಜೀವ್ (21), ರಾಹುಲ್ (21), ಜಿಷ್ಣು(20), ಮುಕ್ತಾರ್ ಅಲಿ (19), ಮಹಮ್ಮದ್ ರಝೀಮ್ (20) ಬಂಧಿತ ವಿದ್ಯಾರ್ಥಿಗಳು. 

ಇವರು  ಮೊದಲ ವರ್ಷದ ಬಿ- ಫಾರ್ಮಾ ವಿದ್ಯಾರ್ಥಿಗೆ ತಲೆಕೂದಲು ಮತ್ತು ಮೀಸೆ ತೆಗೆದು ಬರುವಂತೆ ಹೇಳಿದ್ದರು. ಆದರೆ ವಿದ್ಯಾರ್ಥಿ ಹಾಗೆ ಮಾಡದೇ ಇದ್ದಾಗ ಹಲ್ಲೆ ನಡೆಸಿದ್ದು, ಐದಾರು ದಿನಗಳ ಕಾಲ ನಿರಂತರ ರ್‍ಯಾಗಿಂಗ್ ಮಾಡಿದ್ದರು ಎಂದು ಆರೋಪಿಸಲಾಗಿದೆ.
ರ್‍ಯಾಗಿಂಗ್ ಗೆ ಒಳಗಾದ ವಿದ್ಯಾರ್ಥಿ ಮತ್ತು ಬಂಧಿತರೆಲ್ಲರೂ ಕೇರಳ ಮೂಲದವರಾಗಿದ್ದು, ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!