ಮಣಿಪಾಲ : ತೋಡಿಗೆ ಬಿದ್ದು ವ್ಯಕ್ತಿ ಮೃತ್ಯು
ಮಣಿಪಾಲ ಜ.14 (ಉಡುಪಿ ಟೈಮ್ಸ್ ವರದಿ) : ಆಕಸ್ಮಿಕವಾಗಿ ತೋಡಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸುಧಾಕರ ಪೂಜಾರಿ (43) ಮೃತಪಟ್ಟವರು.
ಇವರು ವಿಪರೀತ ಮದ್ಯ ಸೇವನೆಯ ಅಭ್ಯಾಸವನ್ನು ಹೊಂದಿದ್ದರು. ಜ.12 ರ ರಾತ್ರಿಯಿಂದ ಜ.13 ರ ಬೆಳಗ್ಗಿನ ಅವಧಿಯಲ್ಲಿ ಗರಡಿ ರಸ್ತೆಯಲ್ಲಿ ಇರುವ ಮುದ್ದು ಪೂಜಾರಿ ರವರ ತೋಟದ ಬಳಿಯಲ್ಲಿರುವ ಕಿರು ಬ್ರಿಡ್ಜ್ ಬಳಿ ಆಕಸ್ಮಿಕವಾಗಿ ಕಾಲು ಜಾರಿ ತೋಡಿಗೆ ಕವಚಿ ಬಿದ್ದು ನೀರಿನಲ್ಲಿ ಉಸಿರು ಕಟ್ಟಿ ಮೃತಪಟ್ಟಿದ್ದಾರೆ ಎಂಬುದಾಗಿ ಮೃತರ ಪತ್ನಿ ಜಯಲಕ್ಷ್ಮೀ ಎಂಬವರು ನೀಡಿದ ಮಾಹಿತಿಯಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಾಲಾಗಿದೆ.