ಇ-ತ್ಯಾಜ್ಯವಿಲೇವಾರಿಗೆ ಉಡುಪಿ ನಗರಸಭೆಯಿಂದ ಒಪ್ಪಂದ: ಸುಮಿತ್ರಾ ನಾಯಕ್

ಉಡುಪಿ ಜ.14 : ಉಡುಪಿ ನಗರಸಭೆಯಿಂದ ಸಂಗ್ರಹಿಸಲಾಗುವ ಇ- ವೇಸ್ಟ್(ಇಲೆಕ್ಟ್ರಾನಿಕ್ ತ್ಯಾಜ್ಯ)ನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ನಗರಸಭೆಯು ಲಯನ್ಸ್ ಇಂಟರ್ ನ್ಯಾಷನಲ್ ಮಣಿಪಾಲ್ ಲಯನ್ಸ್ ಚಾರಿಟೇಬಲ್ ಫೌಂಡೇಶನ್ ಜೊತೆ 4-ಆರ್ ರಿಸೈಕಲಿಂಗ್ ಇ-ವೇಸ್ಟ್‍ನೊಂದಿಗೆ ಒಡಬಂಡಿಕೆ ಮಾಡಿಕೊಂಡಿರುವುದಾಗಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್ ಅವರು ಹೇಳಿದ್ದಾರೆ.

ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಎಲ್‍ಸಿಡಿ, ಎಲ್‍ಇಡಿ, ಟಿವಿ, ಹೋಮ್ ಅಪ್ಲೇಯನಸ್, ಮಿಕ್ಸಿ, ಗ್ರೈಂಡರ್, ರೆಫ್ರಿಜರೇಟರ್, ವಾಷಿಂಗ್ ಮೆಷಿನ್, ಮೈಕ್ರೋ ಒವನ್, ಐರನ್ ಬಾಕ್ಸ್, ಸ್ಪೀಕರ್, ಏರ್ ಕಂಡಿಷನರ್‍ವೈರ್, ಸ್ಮಾರ್ಟ್ ಫೋನ್, ಕಂಪ್ಯೂಟರ್‍ಬಲ್ಬ್ ಗಳು ಸೇರಿದಂತೆ ಎಲ್ಲ ರೀತಿಯ ಇ-ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ವಿಲೇ ವಾರಿ ಮಾಡದಿದ್ದರೆ ಇ ತ್ಯಾಜ್ಯದಲ್ಲಿರುವ ಸೀಸ, ಪಾದರಸ, ಆರ್ಸೆನಿಕ್ ಕ್ಯಾಡ್ಮಿ ಯಂತಹ ರಾಸಾಯನಿಕ ವಸ್ತುಗಳು ಪರಿಸರಕ್ಕೆ ಸಾಕಷ್ಟು ಹಾನಿಯುಂಟು ಮಾಡುತ್ತದೆ. ಎಲ್ಲೆಂದರಲ್ಲಿ ಎಸೆಯುವುದರಿಂದ ಜಲಮಾಲಿನ್ಯ, ಸುಡುವುದರಿಂದ ವಾಯು ಮಾಲಿನ್ಯ ಉಂಟು ಮಾಡಿ ಮಾರಣಾಂತಿಕ ರೋಗಗಳಿಗೆ ಕಾರಣ ವಾಗುತ್ತದೆ. ಈ ನಿಟ್ಟಿನಲ್ಲಿ ಈ ಒಡಬಂಡಿಕೆ ಮಾಡಿಕೊಂಡು ಇ ತ್ಯಾಜ್ಯವನ್ನು ವಿಲೇವಾರಿ ಮಾಡಲು ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.

ನಗರಸಭೆಯಿಂದ ಪ್ರತಿ ತಿಂಗಳ ಎರಡನೇ ಶನಿವಾರದಂದು ಗ್ಲಾಸ್ ಹಾಗೂ ಇ ವೇಸ್ಟ್‍ಗಳನ್ನು ಸಂಗ್ರಹಿಸಲಾಗುತ್ತದೆ. ಪ್ರತಿ ತಿಂಗಳು 15.5ರಿಂದ 18.5 ಟನ್‍ಗಳಷ್ಟು ಈ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತಿದೆ. ಇದರಲ್ಲಿ ಗ್ಲಾಸ್ ವೇಸ್ಟ್‍ಗಳನ್ನು ವಿಲೇವಾರಿ ಮಾಡಲಾಗುತ್ತಿದೆ. ಆದರೆ ಇ-ತ್ಯಾಜ್ಯವನ್ನು ವಿಲೇ ವಾರಿ ಮಾಡಲು ಆಗುತ್ತಿರಲಿಲ್ಲ. ಆದರೀಗ ಒಡಂಬಡಿಕೆ ಬಳಿಕ ನಗರಸಭೆಯ ಬನ್ನಂಜೆ ಒಣ ಮತ್ತು ಇಲೆಕ್ಟ್ರಾನಿಕ್ ತ್ಯಾಜ್ಯ ಸಂಗ್ರಹ ಘಟಕದಲ್ಲಿ, ಬೀಡಿನಗುಡ್ಡೆ ಒಣ ಹಾಗೂ ಇಲೆಕ್ಟ್ರೀನಿಕ್ಸ್ ತ್ಯಾಜ್ಯ ಸಂಗ್ರಹಣ ಘಟಕದಲ್ಲಿ, ಅಲೆವೂರು ಘನತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ, ಮಣಿಪಾಲ ಉಪ ಕಚೇರಿಯಲ್ಲಿ ಹಾಗೂ ಮಲ್ಪೆ ಬೀಚ್‍ನ ಒಣ ಹಾಗೂ ಇಲೆಕ್ಟ್ರಾನಿಕ್ ತ್ಯಾಜ್ಯ ಸಂಗ್ರಹಣ ಘಟಕಗಳಲ್ಲಿ ಬೆಳಗ್ಗೆ 10ಗಂಟೆಯಿಂದ ಸಂಜೆ 5ಗಂಟೆಯವರೆಗೆ ಹಾಗೂ ಪ್ರತಿ ತಿಂಗಳ ಎರಡನೇ ಶನಿವಾರದಂದು ಮನೆ ಮನೆ ಕಸ ಸಂಗ್ರಹಣೆಯ ವಾಹನಗಳಲ್ಲಿ ಸಂಗ್ರಹಿಸಲಾಗುವುದು. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮಾಹಿತಿ ನೀಡಿದರು.

Leave a Reply

Your email address will not be published. Required fields are marked *

error: Content is protected !!