ಕಾರ್ಕಳ: ಕೂಲಿ ಕಾರ್ಮಿಕ ನಾಪತ್ತೆ
ಕಾರ್ಕಳ ಜ.14 (ಉಡುಪಿ ಟೈಮ್ಸ್ ವರದಿ) : ಕೆಲಸಕ್ಕೆಂದು ಹೋದ ವ್ಯಕ್ತಿಯೊಬ್ಬರು ವಾಪಸ್ಸು ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ಕಾರ್ಕಳದ ನಿಟ್ಟೆ ಗ್ರಾಮದಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ ಕೂಲಿ ಕೆಲಸ ಮಾಡಿಕೊಂಡಿದ್ದ ಆಲ್ವಿನ್ ನೋರೊನ್ನಾ (44) ನಾಪತ್ತೆಯಾಗಿರುವವರು.
ಇವರು ವಿಪರೀತ ಮದ್ಯಪಾನ ಮಾಡುವ ಅಭ್ಯಾಸ ಹೊಂದಿದ್ದು, ಜ.11 ರಂದು ಬೆಳಿಗ್ಗೆ ಕೆಲಸಕ್ಕೆಂದು ಹೋದವರು ಇದುವರೆಗೆ ವಾಪಾಸು ಮನೆಗೆ ಬಾರದೆ ಕಾಣೆಯಾಗಿದ್ದಾರೆ. ಈ ಬಗ್ಗೆ ನಾಪತ್ತೆಯಾಗಿರುವ ಆಲ್ವಿನ್ ನೋರೊನ್ನಾ ಅವರ ತಾಯಿ ಸಿಸಿಲಿಯಾ ನೋರೋನ್ನಾ ಅವರು ನೀಡಿದ ಮಾಹಿತಿಯಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.