40% ಸರ್ಕಾರದ `ಹುದ್ದೆ ಮಾರಾಟ ಯೋಜನೆ’ ಯಶಸ್ವಿಯಾಗಿ ಮುಂದುವರಿದಿದೆ: ಕಾಂಗ್ರೆಸ್ ಟ್ವೀಟ್

ಬೆಂಗಳೂರು, ಜ.14 : 40% ಸರ್ಕಾರದ `ಹುದ್ದೆ ಮಾರಾಟ ಯೋಜನೆ’ ಯಶಸ್ವಿಯಾಗಿ ಮುಂದುವರಿದಿದೆ ಎಂದು ಕಾಂಗ್ರೆಸ್ ರಾಜ್ಯ ಸರಕಾರವನ್ನು ಟೀಕಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ “40% ಸರ್ಕಾರದ `ಹುದ್ದೆ ಮಾರಾಟ ಯೋಜನೆ’ ಯಶಸ್ವಿಯಾಗಿ ಮುಂದುವರೆದಿದೆ. ಆರೋಗ್ಯ ಇಲಾಖೆಯ ಸಿಎಚ್‍ಒ ನೇಮಕಾತಿಯಲ್ಲಿ ಅರ್ಹರನ್ನು ಕಡೆಗಣಿಸಿ ಗೋಲ್ಮಾಲ್ ನಡೆಸಿರುವ ಸಂಗತಿ ಬೆಳಕಿಗೆ ಬಂದಿದೆ, ಇದು ಹುದ್ದೆ ವ್ಯಾಪಾರದ ಚೌಕಾಶಿಗಾಗಿ ಮಾಡುತ್ತಿರುವ ತಂತ್ರವಲ್ಲವೇ? ಈ ನೇಮಕಾತಿಯಲ್ಲಿ ಎಷ್ಟು ಕೋಟಿ ಡೀಲಿಂಗ್ ಕುದುರಿಸಿಕೊಂಡಿದ್ದೀರಿ ?” ಎಂದು ಆರೋಗ್ಯ ಸಚಿವ ಸುಧಾಕರ್ ಅವರನ್ನು ಪ್ರಶ್ನೆ ಮಾಡಿದೆ.

ಜಿಲ್ಲೆಗಳ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಗುತ್ತಿಗೆ ಆಧಾರದಲ್ಲಿ ಸಮುದಾಯ ಆರೋಗ್ಯ ಅಧಿಕಾರಿ (ಸಿ.ಎಚ್.ಒ)ಗಳ ನೇಮಕಾತಿಯಲ್ಲಿ ಇಲಾಖಾ ಅಧಿಕಾರಿಗಳು ಅರ್ಹ ಅಭ್ಯರ್ಥಿಗಳಿಗೆ ಅವಕಾಶ ನೀಡದಿರುವ ಬಗ್ಗೆ ಆರೋಪ ವ್ಯಕ್ತವಾಗಿದೆ. ಈ ವಿಚಾರವಾಗಿ ಟ್ವೀಟ್ ಮೂಲಕ ಕಾಂಗ್ರೆಸ್ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

Leave a Reply

Your email address will not be published. Required fields are marked *

error: Content is protected !!