ಉಡುಪಿ: ರಿಲಾಯನ್ಸ್ ಸ್ಮಾರ್ಟ್ ವತಿಯಿಂದ ರೈತರಿಗೆ ಸನ್ಮಾನ
ಉಡುಪಿ ಜ.14 (ಉಡುಪಿ ಟೈಮ್ಸ್ ವರದಿ) : ನಗರದ ಪ್ರಸಿದ್ಧ ರಿಲಾಯನ್ಸ್ ಸ್ಮಾರ್ಟ್ ವತಿಯಿಂದ ಮಳಿಗೆಗೆ ಹಣ್ಣು-ತರಕಾರಿಗಳನ್ನು ಪೂರೈಸುತ್ತಿರುವ ಪ್ರಗತಿಪರ ಕೃಷಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಕೃಷಿಕರು ಬೆಳೆದ ತರಕಾರಿ ಹಣ್ಣುಗಳನ್ನು ರಿಲಾಯನ್ಸ್ ಸಂಸ್ಥೆ ಖರೀದಿಸಿ ಅದನ್ನು ನೇರವಾಗಿ ಗ್ರಾಹಕರಿಗೆ ನೀಡುತ್ತಿದೆ. ಈ ರೈತರನ್ನು ಪ್ರೋತ್ಸಾಹಿಸುವ ಹಾಗೂ ಅವರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸಂಸ್ಥೆ ವತಿಯಿಂದ ಪ್ರಗತಿಪರ ರೈತರಾದ ನರಸಿಂಹ ನಾಯ್ಕ, ರಾಘವೇಂದ್ರ ಭಟ್, ಶೇಖರ ಮರಕಾಲ, ಸುರೇಂದ್ರ, ರಮೇಶ್, ಅರುಣ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ರಿಲಾಯನ್ಸ್ ನ ಸ್ಟೇಟ್ ಬಿಸಿನೆಸ್ ಹೆಡ್ ಸುಧಾಕರ್ ದೇವರಾಜ್, ಹಣ್ಣು ಮತ್ತು ತರಕಾರಿ ವಿಭಾಗದ ರಘು, ಸಂಸ್ಥೆಯ ಎಚ್.ಆರ್ ರಾಕೇಶ್ ಶೆಟ್ಟಿ, ಸ್ಟೋರ್ ಮ್ಯಾನೇಜರ್ ಮೋಹನ್ ಕುಮಾರ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.