ಉಡುಪಿ: ವಿದ್ಯಾರ್ಥಿನಿ ನಾಪತ್ತೆ

ಉಡುಪಿ ಜ.14 (ಉಡುಪಿ ಟೈಮ್ಸ್ ವರದಿ): ಮಧ್ಯಾಹ್ನದ ವೇಳೆ ಕಾಲೇಜಿನಿಂದ ಹೋದ ವಿದ್ಯಾರ್ಥಿನಿ ವಾಪಸ್ಸು ಮನೆಗೆ ಬಾರದೇ ನಾಪತ್ತೆಯಾಗಿರುವ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾಪುವಿನ ಶಿರ್ವದ ರಿಯೋನಾ ಸ್ಟೇಫ್ನಿ ಅಮ್ಮನ್ನ (20) ನಾಪತ್ತೆಯಾದ ವಿದ್ಯಾರ್ಥಿನಿ.

ಇವರು ಜ.13 ರಂದು ಮಧ್ಯಾಹ್ನ 12:00 ಗಂಟೆ ಸುಮಾರಿಗೆ ಕಾಲೇಜಿನಿಂದ ಅನುಮತಿ ಪಡೆದು ಹೋದವರು ಈವರೆಗೂ ವಾಪಾಸು ಮನೆಗೆ ಬಾರದೇ ಕಾಣೆಯಾಗಿದ್ದಾರೆ. ಅವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಉಡುಪಿ ನಗರ ಪೊಲೀಸ್ ಠಾಣೆಗೆ ತಿಳಿಸುವಂತೆ ಸೂಚನೆ ನೀಡಲಾಗಿದೆ.

ಈ ಬಗ್ಗೆ ನಾಪತ್ತೆಯಾಗಿರುವ ರಿಯೋನ್ ಅವರ ತಾಯಿ ಐರಿನ್ ರೀಟಾ ಅಮ್ಮನ್ನ ಅವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!