ಉಡುಪಿ: ಬೀಡಿನಗುಡ್ಡೆ ರಂಗ ಮಂದಿರದಲ್ಲಿ “ಪವರ್ ಪರ್ಬ”ಕ್ಕೆ ಚಾಲನೆ
ಉಡುಪಿ ಜ.14 : ಬೀಡಿನಗುಡ್ಡೆ ಮಹಾತ್ಮಾಗಾಂಧಿ ಬಯಲು ರಂಗ ಮಂದಿರದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಮಹಿಳಾ ಉದ್ಯಮಿಗಳ ಬೃಹತ್ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ‘ಪವರ್ ಪರ್ಬ” ನಿನ್ನೆ ಸಂಜೆ ಉದ್ಘಾಟನೆಗೊಂಡಿತು.
ಈ ಬೃಹತ್ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ನಿವೃತ್ತ ಜಿಲ್ಲಾಧಿಕಾರಿ ಕಲ್ಪನಾ ಗೋಪಾಲನ್ ಅವರು ಉದ್ಘಾಟಿಸಿದರು. ಈ ವೇಳೆ ಮಾರಾಟ ಮಳಿಗೆಗಳನ್ನು ಶಾಸಕ ರಘುಪತಿ ಭಟ್ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಪವರ್ ಸಂಸ್ಥೆಯ ಅಧ್ಯಕ್ಷೆ ಪೂನಂ ಶೆಟ್ಟಿ, ಕಾರ್ಯದರ್ಶಿ ಅರ್ಚನಾ ರಾವ್, ಖಜಾಂಚಿ ಪ್ರತಿಭಾ ಆರ್. ವಿ. ಕಾರ್ಯಕ್ರಮ ಸಂಯೋಜಕಿ ಶಿಲ್ಪಾ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ದೀನಾ ಪ್ರಭಾಕರ್, ಜೊತೆ ಕಾರ್ಯದರ್ಶಿ ತೃಪ್ತಿ ನಾಯಕ್, ಪುಷ್ಪಾ ಗಣೇಶ್ ರಾವ್, ಸಂಸ್ಥಾಪಕ ಅಧ್ಯಕ್ಷೆ ರೇಣು ಜಯರಾಂ, ಎಂ.ಎಸ್.ಎಂ.ಇ ಸಹಾಯಕ ನಿರ್ದೇಶಕಿ ಶೃತಿ ಜಿ.ಕೆ, ಜಿಲ್ಲಾ ಕೈಗಾರಿಕಾ ಕೇಂದ್ರದ ನಿರ್ದೇಶಕ ನಾಗರಾಜ್, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮ, ಯೂನಿಯನ್ ಬ್ಯಾಂಕ್ ಡಿಜಿಎಂ ವಾಸಪ್ಪ, ಎ.ಪಿ ಆಚಾರ್ ಮುಂತಾದವರು ಉಪಸ್ಥಿತರಿದ್ದರು.