ಬೆಳ್ವೆ ಜುಮ್ಮಾ ಮಸೀದಿ: ಮೂರು ಬಡ ಯುವತಿಯರ ಸರಳ ವಿವಾಹ
ಬೆಳ್ವೆ ಜ.13 (ಉಡುಪಿ ಟೈಮ್ಸ್ ವರದಿ): ನಮ್ಮ ನಾಡ ಒಕ್ಕೂಟ ಸೆಂಟ್ರಲ್ ಕಮಿಟಿ – ಹೆಬ್ರಿ ಘಟಕ ಹಾಗೂ ಇಸ್ಲಾಮಿಕ್ ಯೂತ್ ಫೆಡರೇಷನ್ ಬೆಳ್ವೆ ಇವರ ಆಶ್ರಯದಲ್ಲಿ ಬೆಳ್ವೆ ಜುಮ್ಮಾ ಮಸೀದಿ ಜಮಾತ್ ಕಮಿಟಿ ಮತ್ತು ಬೆಳ್ವೆಯ ಅನಿವಾಸಿ ಭಾರತೀಯರ ಸಹಕಾರದೊಂದಿಗೆ ಅಲ್ವಾಡಿ ಗ್ರಾಮದ ಬಡ ಕುಟುಂಬದ ಕೋವಿಡ್ ಮಹಾಮಾರಿಯಲ್ಲೀ ತಾಯಿಯನ್ನು ಕಳೆದುಕೊಂಡಿರುವ ಮೂರು ಯುವತಿಯರ ಸರಳ ವಿವಾಹ ಸಮಾರಂಭ ಬೆಳ್ವೆ ಜುಮ್ಮಾ ಮಸೀದಿ ಆವರಣದಲ್ಲಿ ನಡೆಸಲಾಯಿತು.
ಬೆಳ್ವೆ ಮಸೀದಿಯ ಖತೀಬ್ ಮೌಲಾನ ಮೊಹಮ್ಮದ್ ರಫೀಕ್ ನಿಕಾಹ ಖುತುಭ ಪಾರಾಯಣ ಗೈದರು. ಹಾಗೂ ಉಡುಪಿಯ ಮೌಲಾನ ಆಸಿಫ್ ಅಲ್ಬಡಿ ನಿಖಾಹ ನೆರವೇರಿಸಿದರು.
ಉಡುಪಿ ಜಿಲ್ಲಾ ನಮ್ಮ ನಾಡ ಒಕ್ಕೂಟದ ಅಧ್ಯಕ್ಷರಾದ ಮುಸ್ತಾಕ್ ಅಹಮದ್ ರವರ ಮಾರ್ಗದರ್ಶನದಲ್ಲಿ ಈ ವಿವಾಹ ಸಮಾರಂಭ ನಡೆದಿದ್ದು, ನಮ್ಮ ನಾಡ ಒಕ್ಕೂಟದ ಹೆಬ್ರಿಯ ಅಧ್ಯಕ್ಷ ಮೊಹಮ್ಮದ್ ರಫೀಕ್ ಅಜೆಕಾರು, ಪ್ರದಾನ ಕಾರ್ಯದರ್ಶಿ ಅಬ್ದುಲ್ ಶುಕೂರ್ ಬೆಳ್ವೆ, ಮತ್ತು ಇಸ್ಲಾಮಿಕ್ ಯೂತ್ ಫೆಡರೇಷನ್ ಬೆಳ್ವೆ ಅಧ್ಯಕ್ಷ ಮೊಹಮ್ಮದ್ ನಝೀರ್, ಕಾರ್ಯದರ್ಶಿ ಮೊಹಮ್ಮದ್ ಆಸಿಫ್ ಅಲ್ಬಾಡಿ ಈ ಮದುವೆಯ ಸಾರಥ್ಯವನ್ನು ವಹಿಸಿದ್ದರು.
ಈ ವೇಳೆ ಉಡುಪಿ ಜಿಲ್ಲಾ ನಮ್ಮ ನಾಡ ಒಕ್ಕೂಟದ ಪ್ರದಾನ ಕಾರ್ಯದರ್ಶಿ ಮೌಲಾನ ಜಮೀರ್ ಅಹಮದ್ ರಷದಿ ಸರಳ ವಿವಾಹದ ಮಹತ್ವದ ಕುರಿತು ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ರೈತ ಸಂಘದ ಪ್ರದಾನ ಕಾರ್ಯದರ್ಶಿ ಸತೀಶ್ ಕಿಣಿ, ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ, ಸದಸ್ಯ ಕರುಣಾಕರ್ ಶೆಟ್ಟಿ, ಬೆಳ್ವೆ ಸಹಕಾರಿ ಸಂಘದ ಅಧ್ಯಕ್ಷ ಜಯರಾಂ ಶೆಟ್ಟಿ, ಬೆಳ್ವೆ ಶ್ರಿ ಶಂಕೆರನಾರಾಯಣ ದೇವಸ್ತಾನದ ಆಡಳಿತ ಮುಕ್ತೆಸರ ಶಂಕೆರ್ ಶೆಟ್ಟಿ, ಇಂಜಿನೀಯರ್ ಮಹಾಬಲ ಅಲ್ಬಾಡಿ, ಜುಮ್ಮಾ ಮಸೀದಿ ಅಧ್ಯಕ್ಷ ಅಹಮದ್ ಬ್ಯಾರಿ, ಕಾರ್ಯದರ್ಶಿ ಇಕ್ಬಾಲ್, ಉಪಾಧ್ಯಕ್ಷ ಶಕೀಲ್, ಕೋಶಾಧಿಕಾರಿ ಅನ್ಸಾರ್ ಬೆಳ್ವೆ, ಜೊತೆ ಕಾರ್ಯದರ್ಶಿ ಷರೀಫ್ ಬೆಳ್ವೆ, ಮದ್ರಸ ಕಮಿಟಿ ಉಪಾಧ್ಯಕ್ಷ ಅಬ್ದುಲ್ ಬ್ಯಾರಿ, ಕಾರ್ಯದರ್ಶಿ ಇಸ್ಮಾಯಿಲ್, ನಮ್ಮ ನಾಡ ಒಕ್ಕೂಟದ ಸೆಂಟ್ರಲ್ ಸಂಘಟನಾ ಕಾರ್ಯದರ್ಶಿ ಹುಸೇನ್ ಹೈಕಾಡಿ, ಜಿಲ್ಲಾ ಉಪಾಧ್ಯಕ್ಷ ಅಬ್ಬು ಮೊಹಮ್ಮದ್ ಕುಂದಾಪುರ, ಹೆಬ್ರಿಯ ಉಪಾಧ್ಯಕ್ಷ ಸಮದ್ ಹೈಕಾಡಿ ಜಿಲ್ಲಾ ಸದಸ್ಯ, ಖಾದರ್ ಮೊಡುಗೋಪಡಿ, ಏನ್.ಏನ್.ಓ ಕುಂದಾಪುರ ತಾಲೂಕು ಅಧ್ಯಕ್ಷ ದಸ್ತಗೀರ ಕಂಡ್ಲೂರ್, ಪಿರು ಸಾಹೇಬ್ ಉಡುಪಿ, ಇಸ್ಮಾಯಿಲ್, ಮುಸ್ಲೀಂ ಒಕ್ಕೂಟ ಉಡುಪಿ ತಾಲೂಕಿನ ಜಫ್ರುಲ್ಲ, ಉಡುಪಿ ಮಾಜಿ ತಾಲೂಕು ಪಂಚಾಯತ್ ಸದಸ್ಯ ರಹ್ಮತುಲ್ಲ ಹುಡೆ, ದಿನಕರ್ ಶೆಟ್ಟಿ, ಇಸ್ಮಾಯಿಲ್ ಕೋಟೇಶ್ವರ, ಅನ್ವರ್ ಆಲ್ಬಾಡಿ, ಹೆಬ್ರಿಯ ಏನ್.ಏನ್. ಓ. ಕಾರ್ಯದರ್ಶಿ ಅರಾಫತ್ ಅಲ್ಬಾಡಿ, ರೇಯನ್ ಬೆಳ್ವೆ, ಉದ್ಯಮಿ ಫಾರೂಕ್ ಬೆಳ್ವೆ, ಹನೀಫ್ ಬೆಳ್ವೆ, ಹಸೈನಾರ್, ಫಾರೂಕ್ ಬೆಳ್ವೆ, ಮುನಾವರ್ ಅಜೆಕಾರು, ಜೀಫ್ರಿ ಸಾಹೇಬ್, ಶಾವಲ್ ಹಮೀದ್ ಮುಂತಾದವರು ಉಪಸ್ಥಿತರಿದ್ದರು
ಈ ಸರಳ ವಿವಾಹ ಸಮಾರಂಭಕ್ಕೆ ಬಹರೈನ್ ಮಯ್ಯಧಿ ಬ್ಯಾರಿ, ಸೌದಿ ಅರೇಬಿಯಾದ ಸಲೀಂ ಪುತ್ತಿಗೆ, ಇಲ್ಯಾಸ್ ಬೆಳ್ವೆ, ಪರ್ವೇಜ್ ಅಲ್ಬಾಡಿ, ಸಾದಿಕ್ ಅಲ್ಬಾಡಿ, ಇಸ್ಮಾಯಿಲ್ ಶಿರೂರು, ಯುಎಇ ಯ ವಾಸವಿರುವ ಬೆಳ್ವೆಯ ಪಹಿಂ, ನಝೀರ್, ನವಾಝ್, ಹನೀಫ್ ಟಿ.ಕೆ, ಶಹನವಾಝ್, ಜಾವೇದ್, ಒಮಾನ್ನ ಅಕ್ತರ್ ನವಾಝ್, ಸೆಂಟ್ರಲ್ ಕಮಿಟಿ ಅಧ್ಯಕ್ಷ ಮೊಹಮ್ಮದ್ ಸಲೀಂ ದುಬೈ, ಯು ಎಸ್ .ಎ ಅಬ್ದುಲ್ ಸಮಿ, ಕುವೈಟನ ಸರ್ಫರಾಜ್, ಅಸಿರ್ ಬೆಂಗಳೂರು, ಅಫ್ವನ್ ಕೊಡಿ, ಬೆಂಗಳೂರಿನ ಬ್ಯಾರೀಸ್ ಗ್ರೂಫ್ ವಿಶೇಷ ಸಹಕಾರ ನೀಡಿದ್ದರು ಎಂದು ತಿಳಿದು ಬಂದಿದೆ.