ಮಂಗಳೂರು: ಖ್ಯಾತ ಉದ್ಯಮಿ, ಜೆಡಿಎಸ್ ಮುಖಂಡ ಸುಶೀಲ್ ನೊರೊನ್ಹಾ ನಿಧನ
ಮಂಗಳೂರು, ಜ.13 : ಜನತಾದಳ (ಜಾತ್ಯತೀತ) ಮುಖಂಡ, ಖ್ಯಾತ ಉದ್ಯಮಿ ಸುಶೀಲ್ ನೊರೊನ್ಹಾ(60) ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೃತರು ತಾಯಿ ಸ್ಟೆಲ್ಲಾ ನೊರೊನ್ಹಾ, ಪತ್ನಿ ಎಡ್ನಾ ನೊರೊನ್ಹಾ, ಮಗ ಏಂಜೆಲೊ ನೊರೊನ್ಹಾ ಮತ್ತು ಸಹೋದರ ವಕೀಲ ಎಂಪಿ ನೊರೊನ್ಹಾ ಅವರನ್ನು ಅಗಲಿದ್ದಾರೆ.
ಎಲೆಕ್ಟ್ರಿಕಲ್ ಸರಕುಗಳ ಜನಪ್ರಿಯ ಸೇವಾ ಪೂರೈಕೆ ಮಾಡುತ್ತಿದ ಸುಶೀಲ್ ಇಲೆಕ್ಟ್ರಿಕಲ್ಸ್ ಮಾಲೀಕರಾಗಿದ್ದ ಸುಶೀಲ್ ನೊರೊನ್ಹಾ ಅವರು, ಜಿಲ್ಲಾ ಜೆಡಿ(ಎಸ್) ಪ್ರಧಾನ ಕಾರ್ಯದರ್ಶಿ ಹಾಗೂ ವಕ್ತಾರರಾಗಿದ್ದರು. 2012ರಲ್ಲಿ ಜೆಡಿಎಸ್‍ನ ರಾಜ್ಯ ಉಪಾಧ್ಯಕ್ಷರಾಗಿಯೂ ನೇಮಕಗೊಂಡಿದ್ದರು.
ಸುಶೀಲ್ ಅವರು ಸಮುದಾಯದ ಮುಖಂಡರಾಗಿ ಹಾಗೂ ತಮ್ಮ ಸಮಾಜ ಸೇವೆಯಿಂದಲೂ ಗುರುತಿಸಲ್ಪಟ್ಟಿದ್ದರು. ಇದಲ್ಲದೆ ಧರ್ಮಪ್ರಾಂತ್ಯದ ಪಾಲನಾ ಪರಿಷತ್ತಿನ ಕಾರ್ಯದರ್ಶಿಯಾಗಿ, ಕ್ರಿಸ್ಟೋಫರ್ ಅಸೋಸಿಯೇಷನ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.