ಎಲ್ಲರಿಗೂ ಕಾಣುವಂತೆ ಮನೆಯಲ್ಲಿ ತಲ್ವಾರ್ ಇಡಬೇಕು- ಪ್ರಮೋದ್ ಮುತಾಲಿಕ್

ಕಲಬುರಗಿ, ಜ.13 : ಇನ್ಮುಂದೆ ಹಿಂದೂಗಳು ಮನೆಯಲ್ಲಿ ಎಲ್ಲರಿಗೂ ಕಾಣೋ ರೀತಿಯಲ್ಲಿ ಪ್ರತಿಯೊಬ್ಬ ಹಿಂದೂ ತನ್ನ ಮನೆಯಲ್ಲಿ ತಲ್ವಾರ್ ಇಡಬೇಕು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಹೇಳಿದ್ದಾರೆ.

ಕಲಬುರಗಿಯ ಸಮಾವೇಶದಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಹಿಂದೂಗಳು ಮನೆ ಮನೆಯಲ್ಲಿ ತಲ್ವಾರ್ ಇಡಬೇಕು. ಮನೆಯಲ್ಲಿ ಎಲ್ಲರಿಗೂ ಕಾಣೋ ರೀತಿಯಲ್ಲಿ ಇಡಬೇಕು. ಮೊದಲು ನಾವೆಲ್ಲಾ ಆಯುಧಗಳ ಪೂಜೆ ಮಾಡ್ತಿದ್ದೀವಿ, ಪುಸ್ತಕ, ಪೆನ್ನು, ವಾಹನಗಳ ಪೂಜೆ ಮಾಡ್ತಿದ್ದೇವೆ. ಆದ್ರೆ ಇನ್ಮುಂದೆ ತಲ್ವಾರ್, ಚಾಕು, ಕೊಡಲಿ ಇಟ್ಟು ಪೂಜೆ ಮಾಡಬೇಕು ಎಂದು ಕರೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!