ಮಂಗಳೂರು: ಟಿಕೆಟ್ ಬುಕ್ಕಿಂಗ್ ಹೆಸರಲ್ಲಿ ವ್ಯಕ್ತಿಗೆ ವಂಚನೆ
ಮಂಗಳೂರು, ಜ.13 : ಟಿಕೆಟ್ ಬುಕ್ಕಿಂಗ್ ಹೆಸರಲ್ಲಿ ವ್ಯಕ್ತಿಯೊಬ್ಬರ ಖಾತೆಯಿಂದ ವಂಚಕರು 99,860 ರೂ. ದೋಚಿಸಿರುವ ಬಗ್ಗೆ ಮಂಗಳೂರು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ವ್ಯಕ್ತಿಯೊಬ್ಬರು ಯಾತ್ರಾ ಡಾಟ್ ಕಾಮ್ ಎನ್ನುವ ವೆಬ್‍ಸೈಟ್‍ನಲ್ಲಿ ಜ.8 ರಂದು 6,380 ರೂ. ಪಾವತಿ ಟಿಕೆಟ್ ಬುಕ್ ಮಾಡಿದ್ದರು. ಟಿಕೆಟ್ ಬುಕ್ ಮಾಡಿದರೂ, ಟಿಕೆಟ್ ಬಾರದ ಹಿನ್ನೆಲೆಯಲ್ಲಿ ಸಂಸ್ಥೆಯವರಿಗೆ ಕರೆ ಮಾಡಿ ಹಣ ಹಿಂದಿರುಗಿರುವಂತೆ ಆಗ್ರಹಿಸಿದ್ದಾರೆ. ಕರೆ ಸ್ವೀಕರಿಸಿದ ವ್ಯಕ್ತಿ ಅಕೌಂಟ್ ನಂಬರ್‍ನ ಕೊನೇಯ 6 ಸಂಖ್ಯೆಗಳನ್ನು ಕೇಳಿ ಪಡೆದು, ಎರಡು ದಿನದಲ್ಲಿ ಜಮೆಯಾಗುತ್ತದೆ ಎಂದು ತಿಳಿಸಿದ್ದಾನೆ. ಆದರೆ ಜ.11 ರಂದು ಅವರ ಮೊಬೈಲ್ ಗೆ ಖಾತೆಯಿಂದ ಬೇರೆ ಬ್ಯಾಂಕ್ ಖಾತೆಗೆ 99,860 ರೂ. ವರ್ಗಾವಣೆಯಾಗಿರುವ ಕುರಿತು ಬ್ಯಾಂಕ್ ನಿಂದ ಸಂದೇಶ ಬಂದಿದೆ. ಈ ವೇಳೆ ತಾವು ಮೋಸ ಹೋಗಿರುವುದನ್ನು ಅರಿತ ಅವರು ತಕ್ಷಣ ಬ್ಯಾಂಕ್ ನಲ್ಲಿ ದೂರು ದಾಖಲಿಸಿ, ಬಳಿಕ ಸೆನ್ ಠಾಣೆಯಲ್ಲೂ ಆನ್‍ಲೈನ್‍ಲ್ಲಿ ಹಣ ವರ್ಗಾವಣೆ ಮಾಡಿ ವಂಚಿಸಿರುವ ಕುರಿತಂತೆ ದೂರು ದಾಖಲಿಸಿದ್ದಾರೆ.