ಮಂಗಳೂರು: ಬಸ್-ಬೈಕ್ ಡಿಕ್ಕಿ- ಇಬ್ಬರು ವಿದ್ಯಾರ್ಥಿಗಳು ಮೃತ್ಯು
ಮಂಗಳೂರು ಜ.13 : ಬಸ್ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಜೇಶ್ವರದ ಮೀಯಪದವು ಸಮೀಪದ ಬಾಳಿಯೂರು ಎಂಬಲ್ಲಿ ನಡೆದಿದೆ.
ಮಂಗಳೂರಿನ ಖಾಸಗಿ ಕಾಲೇಜಿನ ಪದವಿ ವಿದ್ಯಾರ್ಥಿಗಳಾದ ಮೀಯಪದವು ದರ್ಬೆಯ ಪ್ರೀತೇಶ್ ಶೆಟ್ಟಿ, ಬೆಜ್ಜಂಗಳದ ಅಭಿಷೇಕ್ ಮೃತಪಟ್ಟವರು.
ಘಟನೆಯಲ್ಲಿ ಮತ್ತೋರ್ವ ವಿದ್ಯಾರ್ಥಿ ಗಂಭೀರ ಗಾಯಗೊಂಡಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಸರಗೋಡು- ಕೇರಳ ಪ್ರಮುಖ ರಸ್ತೆ ಅಗಲೀಕರಣದ ಉದ್ದೇಶದಿಂದ ಅಲ್ಲಲ್ಲಿ ಹೊಂಡ ಗುಂಡಿಗಳನ್ನು ತೆರೆದಿದ್ದು, ಇದರಿಂದಾಗಿ ಅಪಘಾತ ನಡೆದಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.