ಶಿರ್ವದ ಬಾಲಪ್ರತಿಭೆ ಏಡನ್ ಕ್ರಿಸ್ ದಾಂತಿ-ಗಣರಾಜ್ಯೋತ್ಸವದ ಪರೇಡ್ ನಲ್ಲಿ ವಿಶೇಷ ಅತಿಥಿಯಾಗಿ ಭಾಗಿ

ಶಿರ್ವ ಜ.13 : ಈ ವರ್ಷದ ಗಣರಾಜ್ಯೋತ್ಸವ ದಿನದ ಪರೇಡ್ ನಲ್ಲಿ ದೇಶದ ರಕ್ಷಣಾ ಸಚಿವ ರಾಜ್‍ನಾಥ ಸಿಂಗ್ ಅವರ ವಿಶೇಷ ಅತಿಥಿಯಾಗಿ ಶಿರ್ವದ ಡಾನ್ ಬೋಸ್ಕೊ ಆಂಗ್ಲಮಾಧ್ಯಮ ಶಾಲೆಯ 5ನೇ ತರಗತಿಯ ಏಡನ್ ಕ್ರಿಸ್ ದಾಂತಿ ಅವರು ಭಾಗವಹಿಸಿ ಪುರಸ್ಕಾರ ಪಡೆಯಲಿದ್ದಾರೆ.

ಜ.26 ರಂದು ದಿಲ್ಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಪರೇಡ್ ನಲ್ಲಿ ಏಡನ್ ಕ್ರಿಸ್ ದಾಂತಿ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು.

ನ.22 ರಂದು ರಕ್ಷಣ ಸಚಿವಾಲಯವು ದೇಶದಾದ್ಯಂತ ಹಮ್ಮಿಕೊಂಡಿದ್ದ ವೀರ್ ಗಾಥಾ – 2.0 ಎಂಬ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ದೇಶದ ರಕ್ಷಣೆ ಮಾಡುವ ವೀರ ಯೋಧರ ಜೀವನದ ಬಗ್ಗೆ ಅವರಿಂದ ವಿದ್ಯಾರ್ಥಿಗಳಿಗೆ ಸಿಗುವ ಸ್ಫೂರ್ತಿಯ ಬಗ್ಗೆ ಕಥೆ, ಕವನ, ಪ್ರಬಂಧ, ಚಿತ್ರಕಲೆ ಇತ್ಯಾದಿ ಸ್ಪರ್ಧೆಗಳಲ್ಲಿ ಏಡನ್ ಕ್ರಿಸ್ ದಾಂತಿ ಅವರು ಭಾಗವಹಿಸಿದ್ದರು. ಹಾಗೂ ವೀರ ಯೋಧ ಪರಮ್ ವೀರ ಚಕ್ರ ಪ್ರಶಸ್ತಿ ಪುರಸ್ಕೃತ ವಿಕ್ರಮ್ ಭಾತ್ರಾ ಅವರ ಜೀವನದ ಬಗ್ಗೆ ಹಿಂದಿ ಕವನ ರಚಿಸಿದ್ದರು. ಜ.3 ರಂದು ಇದರ ಫಲಿತಾಂಶ ಪ್ರಕಟಗೊಂಡಿದ್ದು, ದೇಶದ ಸರ್ವಶೇಷ್ಠ 25 ವಿದ್ಯಾರ್ಥಿಗಳಲ್ಲಿ ಏಡನ್ ಕ್ರಿಸ್ ಒಬ್ಬರಾಗಿ ಆಯ್ಕೆಯಾಗಿದ್ದಾರೆ.

ಇದೀಗ ಏಡನ್ ಕ್ರಿಸ್ ಅವರ ಈ ಸಾಧನೆಗೆ ಶಿರ್ವಸಂತ ಮೇರಿ ಹಾಗೂ ಡಾನ್ ಬೊಸ್ಕೊ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ| ಡಾ| ಲೆಸ್ಲಿ ಡಿ’ಸೋಜಾ, ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲ ವಂ| ರೋಲ್ವಿನ್ ಅರಾನ್ಹ ಹರ್ಷ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!