ಉಡುಪಿ: ಹಿರಿಯ ಛಾಯಾಗ್ರಾಹಕ ಗೋವಿಂದ ಕಲ್ಮಾಡಿ ನಿಧನ
ಉಡುಪಿ ಜ.13(ಉಡುಪಿ ಟೈಮ್ಸ್ ವರದಿ) : ಹಿರಿಯ ಛಾಯಾಗ್ರಾಹಕ ಕಲ್ಮಾಡಿ ನಿವಾಸಿ ಗೋವಿಂದ ಕಲ್ಮಾಡಿ ಅವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಗೋವಿಂದ ಕಲ್ಮಾಡಿ (58) ಅವರು ಅವಿವಾಹಿತರಾಗಿದ್ದು ಸುಮಾರು 35 ವರ್ಷಗಳಿಂದ ಛಾಯಾಗ್ರಾಹಕರಾಗಿ ದುಡಿಯುತ್ತಿದ್ದರು.
ಎಂದಿನಂತೆ ಇಂದು ಅಂಬಲಪಾಡಿ ಶ್ರೀ ಮಹಾಕಾಳಿ ಜನಾರ್ದನ ದೇವಾಲಯದಲ್ಲಿ ದೇವರ ದರ್ಶನ ಪಡೆದು ಸ್ಟೂಡಿಯೋಗೆ ಹೊರಡಬೇಕೆನ್ನುವಷ್ಟರಲ್ಲಿ ಸುಸ್ತಾದ ಇವರು ಆಟೋ ರಿಕ್ಷಾದಲ್ಲಿ ತೆರಳಿದ್ದರು. ಆದರೆ ಸ್ಟೂಡಿಯೋದಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದಿದ್ದರು ಎಂದು ತಿಳಿದು ಬಂದಿದೆ.
ಮೃತರು ಸಹೋದರ ಮತ್ತು ಸಹೋದರಿಯನ್ನು ಅಗಲಿದ್ದಾರೆ.