ಕೋಟ: ಇಸ್ಪೀಟು ಜುಗಾರಿ ಅಡ್ಡೆಗೆ ದಾಳಿ-ನಾಲ್ವರು ವಶ

ಕೋಟ ಜ.11 (ಉಡುಪಿ ಟೈಮ್ಸ್ ವರದಿ) : ಬ್ರಹ್ಮಾವರದ ಅಚ್ಲಾಡಿ ಗ್ರಾಮದ ಗರಿಕೆಮಠದ ಬಳಿಯಿರುವ ಹಾಡಿಯ ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿದ್ದ ಇಸ್ಪೀಟು ಜುಗಾರಿ ಅಡ್ಡೆಗೆ ದಾಳಿ ಮಾಡಿದ ಪೊಲೀಸರು 4 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬ್ರಹ್ಮಾವರದ ಮಂಜುನಾಥ (31 ), ಪಳನಿ ಕುಮಾರ್ (31), ಬಸವರಾಜ್(41), ನಾಗರಾಜ್(46) ಪೊಲೀಸರು ವಶಕ್ಕೆ ಪಡೆದವರು.

ಈ ಬಗ್ಗೆ ಖಚಿತ ಮಾಹಿತಿ ಪಡೆದ ಕೋಟ ಠಾಣೆಯ ಪೊಲೀಸರು ಬ್ರಹ್ಮಾವರ ತಾಲೂಕಿನ ಅಚ್ಲಾಡಿ ಗ್ರಾಮದ ಗರಿಕೆಮಠದ ಬಳಿಯಿರುವ ಹಾಡಿಯ ಸಾರ್ವಜನಿಕ ಸ್ಥಳಕ್ಕೆ ದಾಳಿ ಮಾಡಿ ಈ ನಾಲ್ವರನ್ನು ವಶಕ್ಕೆ ಪಡೆದು, ಅವರ ಬಳಿ ಇದ್ದ 4,350 ನಗದು ಹಾಗೂ ಇಸ್ಪೀಟು ಜುಗಾರಿ ಆಟಕ್ಕೆ ಬಳಸಿದ ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!