3 ಬೈಕ್‍ಗಳಲ್ಲಿ 14 ಜನರ ಸವಾರಿ, ಮುಂದೇನಾಯ್ತು….?

ಬರೇಲಿ (ಉತ್ತರ ಪ್ರದೇಶ): 14 ಜನರು ಮೂರು ಬೈಕ್‍ಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಕುಳಿತುಕೊಂಡು ರಸ್ತೆಯಲ್ಲಿ ಅಪಾಯಕಾರಿ ರೀತಿಯಲ್ಲಿ ಸಂಚರಿಸಿರುವ ಘಟನೆಯೊಂದು ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.

ಇದೀಗ ಯುವಕರ ಸ್ಟಂಟ್‍ನ ವೀಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದು, ಒಂದು ಬೈಕಿನ ಮೇಲೆ ಆರು ಹಾಗೂ ಇನ್ನೆರಡು ಬೈಕ್ ಗಳಲ್ಲಿ ತಲಾ ನಾಲ್ವರು ಸವಾರಿ ಮಾಡುತ್ತಿರುವುದನ್ನು ವೈರಲ್ ವೀಡಿಯೋವನ್ನು ಕಾಣಬಹುದಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬರೇಲಿಯ ಹಿರಿಯ ಪೊಲೀಸ್ ಅಧಿಕಾರಿ ಅಖಿಲೇಶ್ ಕುಮಾರ್ ಚೌರಾಸಿಯಾ ಅವರು, ಮಾಹಿತಿ ಬಂದ ನಂತರ ಬೈಕ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!