ಉಡುಪಿ: ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನಲ್ಲಿ “ತನು ಯೋಗ ಭೂಮಿ” ಕಾರ್ಯಕ್ರಮ

ಉಡುಪಿ ಜ.11 (ಉಡುಪಿ ಟೈಮ್ಸ್ ವರದಿ) : ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರ – ಕಾಲೇಜಿನ ಲಲಿತ ಕಲಾ ಸಂಘದ ವತಿಯಿಂದ ಜ.6 ರಂದು ಅಂತರಾಷ್ಟ್ರೀಯ ಗಿನ್ನಿಸ್ ಬುಕ್ ಆಫ್ ರೆಕಾರ್ಡ ಸಾಧಕಿ ಯುವ ಯೋಗ ಪಟು ತನುಶ್ರೀ ಪಿತ್ರೋಡಿ ಅವರಿಂದ ತನು ಯೋಗ ಭೂಮಿ ಕಾರ್ಯಕ್ರಮ ಕಾಲೇಜಿನ ರಜತ ಮಹೋತ್ಸವ ಸಭಾಂಗಣದಲ್ಲಿ ಆಯೋಜಿಸಲಾಯಿತು.

ಕಾಲೇಜಿನ ಉಪ ಪ್ರಾಂಶುಪಾಲರಾದ ಪ್ರೊ.ಸೋಫಿಯಾ ಡಯಾಸ್ ಇವರು ತನುಶ್ರೀ ಪಿತ್ರೋಡಿಯವರ ಯೋಗ ಸಾಧನೆಯನ್ನು ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಟ್ಟು ಅವರ ಭವಿಷ್ಯದ ಸಾಧನೆಗೆ ಶುಭಕೋರಿದರು.

ಕಾರ್ಯಕ್ರಮದಲ್ಲಿ ಕುಮಾರಿ ತನುಶ್ರೀ ಪಿತ್ರೋಡಿ ಇವರು ಯೋಗದ ಮಹತ್ವವನ್ನು ಸಭೆಗೆ ವಿವರಿಸಿ ಇದು ಹೇಗೆ ನಮ್ಮ ಆರೋಗ್ಯ ವೃದ್ಧಿಯಲ್ಲಿ ಸಹಕರಿಸುತ್ತದೆ ಎಂಬುದನ್ನು ವಿವರಿಸಿದರು. ಹಾಗೂ ವಿವಿಧ ಯೋಗಾಸನಗಳನ್ನು ಮಾಡುವುದರ ಜೊತೆಗೆ ರಾಷ್ಟ್ರ ಪ್ರೇಮವನ್ನು ಬಿಂಬಿಸುವ ನೃತ್ಯ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಿದರು.

ಈ ಸಂದರ್ಭದಲ್ಲಿ ಐ.ಕ್ಯೂ.ಎ.ಸಿ ಸಂಚಾಲಕ ಡಾ ಜಯರಾಮ ಶೆಟ್ಟಿಗಾರ್, ಲಲಿತ ಕಲಾ ಸಂಘದ ಸೋಯೋಜಕ ರವಿನಂದನ್ ಭಟ್, ತನುಶ್ರೀಯವರ ಪೋಷಕರಾದ ಉದಯ ಸುವರ್ಣ ಮತ್ತು ಸಂಧ್ಯಾ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!