ಬೈಂದೂರು: ಹೊಳೆಗೆ ಬಿದ್ದು ಬಾಲಕ ಮೃತ್ಯು
ಬೈಂದೂರು ಜ.11 (ಉಡುಪಿ ಟೈಮ್ಸ್ ವರದಿ) : ಆಟವಾಡಲು ಹೊಳೆಗೆ ಇಳಿದ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಮದ್ದೋಡಿಯಲ್ಲಿ ನಡೆದಿದೆ.
ಅನಿಲ್ (7) ಮೃತ ಬಾಲಕ
ಬಟ್ಟೆ ಒಗೆಯಲು ಬಂದ ತಾಯಿಯ ಜೊತೆಯಲ್ಲಿದ್ದ ಬಾಲಕ ಆಟವಾಡಲು ಹೋಗುತ್ತೆನೆಂದು ಹೊಳೆಯ ಬದಿಗೆ ಹೋಗಿದ್ದಾನೆ. ಈ ವೇಳೆ ಹೊಳೆಗೆ ಇಳಿದ ಬಾಲಕ ಆಯತಪ್ಪಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬೈಂದೂರು ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.