ಉಡುಪಿ; ಎಲೆಕ್ಟ್ರಾನಿಕ್ಸ್ ಕಾಂಪ್ಲೆಕ್ಸ್ ನಲ್ಲಿ ಲಕ್ಕಿ ಕೂಪನ್‌ ಡ್ರಾದ ಫಲಿತಾಂಶ ಪ್ರಕಟ

ಉಡುಪಿ(ಉಡುಪಿ ಟೈಮ್ಸ್ ವರದಿ): ನಗರದ ಎಲೆಕ್ಟ್ರಾನಿಕ್ಸ್ ಕಾಂಪ್ಲೆಕ್ಸ್ ನಲ್ಲಿ ಈ ಬಾರಿಯ ದೀಪಾವಳಿ, ಕ್ರಿಸ್ ಮಸ್ ಮತ್ತು ಹೊಸ ವರುಷದ ಪ್ರಯುಕ್ತ ಗ್ರಾಹಕರಿಗಾಗಿ  ನೀಡಿದ್ದ ಲಕ್ಕಿ ಕೂಪನ್‌ನ ಡ್ರಾ ಕಾರ್ಯಕ್ರಮ  ಜ.16 ರಂದು ನಡೆಯಿತು.  ಲಕ್ಕಿ ಕೂಪನ್ ಡ್ರಾ ದಲ್ಲಿ ವಿಜೇತರಾದವರಿಗೆ ಬಂಪರ್ ಆಫರ್ ಆಗಿ ಆಕರ್ಷಕ ಕೊಡುಗೆ ಸಿಕ್ಕೆವೆ.
ಬಂಪರ್ ಆಫರ್ ನಲ್ಲಿ ವಿಜೇತರಾದ ಕೂಪನ್ ನಂ.15691 ನ ಸತ್ಯಾನಂದ ಶೆಟ್ಟಿ ಸ್ಕೂಟಿಯನ್ನು ಗೆದ್ದು ಕೊಂಡಿದ್ದಾರೆ. ಮೊದಲನೆ  ಬಹುಮಾನವನ್ನು ಕೂಪನ್ ನಂ.12521ನ ಸುದೀರ್ ಶೆಟ್ಟಿ ಅವರು 40 ಇಂಚ್‌ನ ಎಲ್‌ಇಟಿ ಟಿವಿ, ದ್ವಿತೀಯ ಬಹುಮಾನ ವಾಶಿಂಗ್ ಮಿಶಿನ್ ನ್ನು ಕೂಪನ್ ನಂ. 10393 ಯ ದೇವರಾಜ್ ಸುವರ್ಣ , ಹಾಗೂ ತೃತೀಯ ಬಹುಮಾನ  ಗ್ಯಾಸ್ ಸ್ಟೋವ್ ನ್ನು ಕೂಪನ್ ನಂ 14508 ನ ವಿಜಯ ಲಕ್ಷ್ಮೀ ಅವರು ಗೆದ್ದು ಕೊಂಡಿದ್ದಾರೆ. 


2020ರ ಅಕ್ಟೋಬರ್ 15 ರಿಂದ ಆರಂಭಗೊಂಡಿದ್ದ ಈ ಆಫರ್  ಜ. 15 ರ ವರೆಗೆ ಗ್ರಾಹಕರಿಗಾಗಿ ನೀಡಲಾಗಿತ್ತು. ಇದರೊಂದಿಗೆ  ಲಕ್ಕಿ ಕೂಪನ್ ಡ್ರಾ ದಿನದ ಸಂಜೆ 4 ಗಂಟೆ ವರೆಗೆ ಖರೀದಿ ಮಾಡುವ ಗ್ರಾಹಕರೂ ಕೂಡಾ ಈ ಆಫರ್‌ನ ಪ್ರಯೋಜನ ನೀಡಲಾಗಿತ್ತು. ಇದೀಗ ಗ್ರಾಹಕರಿಗೆ ಇನ್ನಷ್ಟು ಉತ್ತಮ‌ ಸೇವೆಗಳನ್ನು ನೀಡುವ ಸಲುವಾಗಿ  ಮುಂದಿನ ತಿಂಗಳಿನಿಂದ ಗ್ರಾಹಕರಿಗಾಗಿ ವಿಶೇಷ ಆಫರ್ ನೀಡಲಾಗಿದ್ದು ಪ್ರತೀ ಖರೀದಿ ಮೇಲೆ ಲಕ್ಕಿ ಕೂಪನ್ ಇರಲಿದೆ.

ಅಲ್ಲದೆ ಪ್ರತೀ ತಿಂಗಳು 15ಕ್ಕೆ ಈ ಕೂಪನ್‌ನ ಡ್ರಾ ಕೂಡ ನಡೆಯಲಿದೆ. ಇದರ ಜೊತೆಗೆ ಮುಂದಿನ ವರುಷ ಜ.22 ಕ್ಕೆ ನಡೆಯುವ ಬಂಪರ್ ಡ್ರಾ ದಲ್ಲಿ ವಿಜೇತರಿಗೆ ಆಕರ್ಷಕ ಬಂಪರ್ ಕೊಡುಗೆಗಳು ಸಿಗಲಿದೆ, ಎಂದು ಎಲೆಕ್ಟ್ರಾನಿಕ್ ಕಾಂಪ್ಲೆಕ್ಸ್ ನ ಮಾಲಕರಾದ ಎಡ್ವರ್ಡ್ ಡಿಸೋಜ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!