ಪ್ರಾಣಿ ವಧೆ ಮಾಡಿ ನೇತು ಹಾಕುವುದು ಮಕ್ಕಳಲ್ಲಿ ಹಿಂಸಾತ್ಮಕ ಭಾವನೆಗೆ ಕಾರಣವಾಗುತ್ತದೆ- ಪೇಜಾವರಶ್ರೀ
ಉಡುಪಿ ಜ.11: ಅಂಗಡಿಗಳಲ್ಲಿ ಪ್ರಾಣಿಗಳನ್ನು ವಧೆ ಮಾಡಿ ನೇತು ಹಾಕುವುದರಿಂದ ಅದನ್ನು ನೋಡುವ ಮಕ್ಕಳಲ್ಲಿ ಹಿಂಸಾತ್ಮಕ ಮನೋಭಾವನೆಗಳು ಬೆಳೆಯಲು ಕಾರಣವಾಗುತ್ತದೆ ಎಂದು ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಹೇಳಿದ್ದಾರೆ.
ಈ ವಿಚಾರವಾಗಿ ಉಡುಪಿಯ ಪೇಜಾವರ ಮಠದಲ್ಲಿ ಮಾತನಾಡಿದ ಅವರು, ಮಕ್ಕಳು ಭಾವೀ ಪ್ರಜೆಗಳು. ಮಕ್ಕಳು ಇದನ್ನು ನೋಡಿದಾಗ ಅವರ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಅವರ ಮನಸ್ಸನ್ನು ಬಾಲ್ಯದಲ್ಲೇ ಹಿಂಸೆಯಿಂದ ದೂರ ಇರುವಂತೆ ನೋಡಿಕೊಳ್ಳಬೇಕು. ಇದಲ್ಲದೇ ಟಿವಿ ಮತ್ತಿತರ ಮಾಧ್ಯಮಗಳಲ್ಲಿ ಬರುವ ಹಿಂಸೆಯಿಂದಲೂ ಅವರನ್ನು ದೂರ ಇರುವಂತೆ ಪೋಷಕರು ಮತ್ತು ಶಿಕ್ಷಕರು ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.