ಸ್ವರಕ್ಷಣೆಯೇ ಮಹಿಳೆಯರಿಗೆ ಭೂಷಣ -ಸಬ್ ಇನ್ಸ್ಪೆಕ್ಟರ್ ವೆಲೆಟಾ ಫೆಮಿನಾ

ಉಡುಪಿ ಜ.10 (ಉಡುಪಿ ಟೈಮ್ಸ್ ವರದಿ): ಪ್ರಸ್ತುತ ಸನ್ನಿವೇಶದಲ್ಲಿ ಹೆಣ್ಣು ಮಕ್ಕಳು ಮತ್ತು ಮಹಿಳೆಯರು ತಮ್ಮ ಬಗ್ಗೆ ಜಾಗರೂಕರಾಗಿರುವ ಅವಶ್ಯಕತೆ ಹೆಚ್ಚಾಗುತ್ತಿದೆ ಸ್ವರಕ್ಷಣೆ ಮತ್ತು ಜಾಗರೂಕತೆ ಎಲ್ಲ ಕಾಲ ಮತ್ತು ಸನ್ನಿವೇಶಗಳಲ್ಲೂ ಮಹಿಳೆಯರಿಗೆ ಭೂಷಣ ಎಂದು ಉಡುಪಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ವೆಲೆಟಾ ಫೆಮಿನಾ ಅವರು ಹೇಳಿದರು.

ಇತ್ತೀಚಿಗೆ ಉಡುಪಿಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಆರ್.ಡಿ.ಎಸ್ ಸಂಸ್ಥೆ, ಶಾಲೆಯ ಗ್ರಾಹಕ ಕ್ಲಬ್ ಮತ್ತು ಎನ್.ಎಸ್.ಎಸ್ ಘಟಕದ ಸಹಯೋಗದಲ್ಲಿ ಸಮುದಾಯ ಜಾಗೃತಿ, ಭಾಗವಹಿಸುವಿಕೆ, ಪುನರ್ ವಸತಿ ಹಾಗೂ ಪುನರ್ ನಿರ್ಮಾಣ ಚಟುವಟಿಕೆಗಳ ಅಡಿಯಲ್ಲಿ ನಡೆದ ಮಹಿಳಾ ಸುರಕ್ಷತಾ ಅರಿವು ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ತಂತ್ರಜ್ಞಾನ ಬೆಳದಂತೆ ಮೋಸದ ಬಲೆಯಲ್ಲಿ ಬೀಳಿಸಲು ಪ್ರಯತ್ನಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ ಇಂದು ಅವಿದ್ಯಾವಂತರಿಗಿಂತ ವಿದ್ಯಾವಂತರೆ ಹೆಚ್ಚು ಹೆಚ್ಚು ಮೋಸದ ಬಲೆಗೆ ಬೀಳುತ್ತಿದ್ದಾರೆ ಎಂದರು.

ಈ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶಾಂತಿ ಪ್ರಭು ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಇರುವ ಸರಕಾರಿ ಸೌಲಭ್ಯ ಮತ್ತು ಯೋಜನೆಗಳ ಕುರಿತು ವಿವರವಾದ ಮಾಹಿತಿಯನ್ನು ನೀಡಿದರು. ಸಂಸ್ಥೆಯ ಮುಖ್ಯ ಶಿಕ್ಷಕಿ ಜಯಲಕ್ಷ್ಮಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಸಮುದಾಯ ಅಭಿವೃದ್ಧಿ ಸಹಾಯಕರಾದ ಮಾಲತೇಶ್, ಎನ್.ಎಸ್.ಎಸ್ ನ ಮಂಜುಳಾ, ಗ್ರಾಹಕ ಕ್ಲಬ್ ನ ಉಪಾಧ್ಯಕ್ಷೆ ಅನಘಾ ಹೊಳ್ಳ, ಶಿಕ್ಷಕ ರಾಮಚಂದ್ರ ಭಟ್, ಆರ್.ಡಿ.ಎಸ್ ಸಂಸ್ಥೆಯ ಟೀಮ್ ಲೀಡರ್ ಜ್ಯೋತಿ, ಮಹೇಶ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!