ಉಡುಪಿ : ಜ.16-22 -ಜಿಲ್ಲಾ ಪೊಲೀಸ್ ಘಟಕದಿಂದ ನಾಗರೀಕ ಬಂದೂಕು ತರಬೇತಿ ಶಿಬಿರ

ಉಡುಪಿ ಜ.10 (ಉಡುಪಿ ಟೈಮ್ಸ್ ವರದಿ) : ಉಡುಪಿ ಜಿಲ್ಲಾ ಪೊಲೀಸ್ ಘಟಕದ ವತಿಯಿಂದ ಜ.16 ರಿಂದ ಜ.22 ರ ವರೆಗೆ ಉಡುಪಿ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಾಗರೀಕ ಬಂದೂಕು ತರಬೇತಿ ಶಿಬಿರ ಆಯೋಜಿಸಲಾಗಿದೆ.

ಈ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ಪ್ರಟಕಣೆ ಮೂಲಕ ಮಾಹಿತಿ ನೀಡಿದ್ದು, ನಾಗರೀಕ ಬಂದೂಕು ತರಬೇತಿಯ ನಮೂನೆಗಳು ಉಡುಪಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಮತ್ತು ಡಿಎಆರ್ ಪೊಲೀಸ್ ಕೇಂದ್ರ ಸ್ಥಾನದಲ್ಲಿ ಲಭ್ಯವಿರುತ್ತದೆ. ಉಡುಪಿ ಜಿಲ್ಲೆಗೆ ಸಂಬಂಧಿಸಿದ ಆಸಕ್ತ ನಾಗರೀಕರು ಅರ್ಜಿ ನಮೂನೆಗಳನ್ನು ಆಯಾಯ ಪೊಲೀಸ್ ಠಾಣೆ/ ಡಿಎಆರ್ ಕೇಂದ್ರಸ್ಥಾನದಿಂದ ಪಡೆದುಕೊಂಡು, ಭರ್ತಿ ಮಾಡಿದ ಅರ್ಜಿ ನಮೂನೆಗಳನ್ನು ಸಂಬಂಧಪಟ್ಟ ಠಾಣೆ ಅಥವಾ ಡಿಎಆರ್ ಕೇಂದ್ರಸ್ಥಾನಕ್ಕೆ ಕೂಡಲೇ ಹಿಂತಿರುಗಿಸುವಂತೆ ಸೂಚನೆ ನೀಡಲಾಗಿದೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಪೊಲೀಸ್ ಉಪಾಧೀಕ್ಷಕರ(ಸಶಸ್ತ್ರ) ಕಛೇರಿ, ಉಡುಪಿ 9480805406 ಅಥವಾ ಪೊಲೀಸ್ ನಿರೀಕ್ಷಕರ (ಸಶಸ್ತ್ರ) ಕಛೇರಿ, ಉಡುಪಿ 9035207269 ಸಂಖ್ಯೆಯನ್ನು ಸಂಪರ್ಕಿಸುವಂತೆ ಸೂಚನೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!